Home » Website » News from jrlobo's Office » ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ
ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ
Image from post regarding ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ

ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ

ನಗರದ ಪಡೀಲು ಬಳಿ ಇತ್ತೀಚೆಗೆ ನಿರ್ಮಾಣಗೊಂಡ ರೈಲ್ವೆ ಕೆಳಸೇತುವೆ ಬಳಿಯಲ್ಲಿರುವ ರಸ್ತೆ ತೀರಾ ದುಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಯಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಸುಮಾರು 1.90 ಕೋಟಿ ವೆಚ್ಚದಲ್ಲಿ ವೀರನಗರ ಹಾಗೂ ವಿಜಯನಗರ ಹೋಗುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಇಂದಿನಿಂದಲೇ ಪ್ರಾರಂಭಿಸಲು ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅದಲ್ಲದೆ ರೂ. 19.00 ಲಕ್ಷ ವೆಚ್ಚದಲ್ಲಿ ಕುಡಿಯುವ ನಳ್ಳಿ ನೀರಿನ ಸಂಪರ್ಕ ಸ್ಥಳಾಂತರ ಕಾಮಗಾರಿಯನ್ನು ಇದರ ಜೊತೆ ಮಾಡಿಸಲಾಗುವುದು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಜೆ.ಆರ್. ಲೋಬೊರವರು ಇಂದು ರೈಲ್ವೆ ಕೆಳಸೇತುವೆ ಬಳಿ ರಸ್ತೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯೆ ಶ್ರೀಮತಿ ಸುಮಯ್ಯ ಅಶ್ರಫ್, ಪಾಲಿಕೆಯ ಅಧಿಕಾರಿಗಳಾದ ಲಿಂಗೇಗೌಡ, ಯಶವಂತ್, ನರೇಶ್ ಶೆಣೈ, ರಿಚರ್ಡ್ , ಕನ್ಸಲ್ಟೆಂಟ್ ಇಂಜಿನಿಯರ್ ಧರ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು. ಈ ಕಾಮಗಾರಿಯನ್ನು ಲ್ಯಾಂಡ್ ಆರ್ಮಿ ಸಂಸ್ಥೆಗೆ ವಹಿಸಲಾಗಿದೆ.

ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ
Image from post regarding ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ

Leave a Reply

Your email address will not be published. Required fields are marked *