ಮಂಗಳೂರು: ಅತ್ತಾವರದಲ್ಲಿ ನಡೆದ ಅನೈತಿಕ ಗೂಂಡಗಿರಿಯಲ್ಲಿ ಗಾಯಗೊಂಡ ಯುವಕನನ್ನು ಶಾಸಕ ಜೆ. ಆರ್, ಲೋಬೊರವರು ಮಂಗಳವಾರ ಅಸ್ಪತ್ರೆಯಲ್ಲಿ ಭೇಟಿ ನೀಡಿ, ಅವರ ಅರೋಗ್ಯ ವಿಚಾರಿಸಿ, ಕಾನೂನು ಕೈಗೆತ್ತಿಕೊಂಡವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಪೋಲಿಸರಿಗೆ ತೀಳಿಸಿರುವುದಾಗಿ ಶಾಸಕರು ಹೇಳಿದರು.

ಇಂತಹ ಅಹಿತಕರ ಘಟನೆಯಿಂದ ಮಂಗಳೂರಿನ ಹೆಸರು ಕೇಡುವುದಲ್ಲದೆ, ಸೌಹರ್ದಯುತ ವಾತವರಣಕ್ಕೆ ದಕ್ಕೆ ಬರುವ ಕ್ರತ್ಯಗಳು ಖಂಡನಿಯ. ಈ ಅಮಾನವೀಯ ಘಟನೆ ಕೇಳಿ ನನಗೆ ತುಂಬಾ ದುಃಖವಾಗಿದೆ. ವಿದ್ಯವಂತರಿರುವ ಈ ಜಿಲ್ಲೆಯಲ್ಲಿ, ಕೆಲವೆ ಕೆಲವು ವ್ಯಕ್ತಿಗಳು ಈ ರೀತಿ ದುಷ್ಕ್ರತ್ಯ ವೇಸಗಿ ನಗರದ ಹೆಸರನ್ನು ಕೇಡಿಸು ಪ್ರಯತ್ನ ಮಾಡುತ್ತಿದ್ದಾರೆ. ಈ ಕ್ರತ್ಯವನ್ನು ಹೇಸಗಿರುವ, ಯಾವುದೆ ಧರ್ಮದವರಾಗಿದ್ದರು, ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರತಿನಿಧಿಗಳಿಗೆ ಹೇಳಿದರು.

Nithika_policegiri_02