ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಜಿಲ್ಲೆಗೆ ಮಾರಕವಾದ ಎತ್ತಿನಹೊಳೆ ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ನೀರಿನ ಲಭ್ಯತೆ ಇಲ್ಲದ ಈ ಯೋಜನೆಗೆ ನನ್ನ ವಿರೋಧವಿದೆ. ಸ್ಥಳೀಯ ಶಾಸಕನಾಗಿ ರಾಜಕಿಯೇತರವಾಗಿ ನಡೆಯುವ ಈ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾವು ಜಿಲ್ಲೆಯ ಒಂದು ಭಾಗವಾಗಿ ಚಿಕ್ಕ ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದೇವೆ ಇದನ್ನು ಕೇಳುವುದು ಸರಕಾರದ ಕರ್ತವ್ಯ. ನೇತ್ರಾವತಿ ಮತ್ತು ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು. ಇದನ್ನು ಜನರ ಜತೆಯಲ್ಲಿ ಹಂಚಿ ಜನರ ಸಂಶಯಗಳನ್ನು ನಿವಾರಣೆಗೊಳಿಸಬೇಕು. ಒಂದು ವೇಳೆ ಸಾಕಷ್ಟು ನೀರಿನ ಲಭ್ಯತೆವಿದ್ದು, ಪಶ್ಚಿಮ ಘಟ್ಟಕ್ಕೆ ಹಾಗೂ ಕರಾವಳಿ ಪ್ರದೇಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮನದಟ್ಟಾದರೆ ಈ ಯೋಜನೆಗೆ ನನ್ನ ವಿರೋಧವಿಲ್ಲ. ಸಾಕಷ್ಟು ನೀರಿನ ಲಭ್ಯತೆ ಇಲ್ಲದೆ ಕರಾವಳಿ ಮತ್ತು ಪಶ್ಚಿಮ ಘಟ್ಟಕ್ಕೆ ತೊಂದರೆಯಾಗುವುದಾದರೆ ಈ ಭಾಗದ ಜನಸಾಮಾನ್ಯರ ಹಾಗೂ ಪಕ್ಷಾತೀತ ಹೋರಾಟಕ್ಕೆ ನನ್ನ ಬೆಂಬಲವಿದೆ.

ಬೆಂಗಳೂರು ಮತ್ತು ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶಗಳಿಗೆ ಪರ್ಯಾಯ ನೀರಿನ ವ್ಯವಸ್ಥೆಗೆ ಶರಾವತಿ ಯೋಜನೆಯಿಂದ ವಿದ್ಯುತ್ ಉತ್ಪಾದನೆಯ ನಂತರ ಕೆಳಗೆ ಹರಿದು ಹೋಗುವಂತಹ ನೀರಿನ ಒಂದು ಭಾಗವನ್ನು ಬಯಲು ಸೀಮೆ ಮತ್ತು ಬೆಂಗಳೂರಿಗೆ ತರಲು ಸರಕಾರ ಯೋಜನೆ ರೂಪಿಸಬೇಕು. ಈ ಬಗ್ಗೆ ಸರಕಾರದ ಗಮನ ಸೆಳೆಯಲು ನಾನು ಪ್ರಯತ್ನಿಸುತ್ತೇನೆ. ನೇತ್ರಾವತಿ ನದಿ ಪ್ರಾಧಿಕಾರ ಬೇಡಿಕೆಗೆ ನಾನು ಸ್ಪಂದಿಸುತ್ತೇನೆ ಹಾಗೂ ಸಮಗ್ರ ಕರಾವಳಿ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.

Milan Castle owners association

Swimming Pool Instructions

1. Its Mandatory to take shower before the use of the Pool.

2. Swim wear is a must for all the people using the Pool.

3. No Child unless a competent swimmer should be left unattended in the vicinity of the Swimming Pool.

4. This being your own swimming pool, try to maintain utmost cleanliness in and around the Swimming Pool.

5. Parents should accompany their Child / Children who are learnesrs / Beginners.

6. Diving is strictly prohibited.

7. Urinating and spitting in and around the swimming pool is strictly prohibited.

8. The society will not be held responsible for any valuables lost.

9. You are swimming at your own risk and for any untoward incident caused, the society shall not be held responsible.

ನೇತ್ರಾವತಿ ಮತ್ತು ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು ಹಾಗೂ ಇದನ್ನು ಜನರ ಜೊತೆಯಲ್ಲಿ ಜನರ ಸಂಶಯಗಳನ್ನು ನಿವಾರಣೆಗೊಳಿಸಬೇಕು. - ಶಾಸಕ ಲೋಬೊ

Image from post regarding ನೇತ್ರಾವತಿ ಮತ್ತು ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು ಹಾಗೂ ಇದನ್ನು ಜನರ ಜೊತೆಯಲ್ಲಿ ಜನರ ಸಂಶಯಗಳನ್ನು ನಿವಾರಣೆಗೊಳಿಸಬೇಕು. – ಶಾಸಕ ಲೋಬೊ

ನೇತ್ರಾವತಿ ಮತ್ತು ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು ಹಾಗೂ ಇದನ್ನು ಜನರ ಜೊತೆಯಲ್ಲಿ ಜನರ ಸಂಶಯಗಳನ್ನು ನಿವಾರಣೆಗೊಳಿಸಬೇಕು. - ಶಾಸಕ ಲೋಬೊ

Image from post regarding ನೇತ್ರಾವತಿ ಮತ್ತು ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು ಹಾಗೂ ಇದನ್ನು ಜನರ ಜೊತೆಯಲ್ಲಿ ಜನರ ಸಂಶಯಗಳನ್ನು ನಿವಾರಣೆಗೊಳಿಸಬೇಕು. – ಶಾಸಕ ಲೋಬೊ