ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿ ಗಳಿಗೆ ಶಾಸಕ ಜೆ.ಆರ್.ಲೋಬೊ ಅವರು ನಿವೇಶನ ಹಂಚಿಕೆ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವು ವರ್ಷಗಳಿಂದ ಶಾಂತ ಆಳ್ವ ಕಂಪೌಂಡ್ ನಿವಾಸಿಗಳು ಹಕ್ಕುಪತ್ರ ವಿಲ್ಲದೆ ಪರದಾಡುತಿದ್ದರು. ಈಗ ಈ ಸಮಸ್ಯೆಯನ್ನು ನೀಗಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ನಗರ ಇತರ ಕಡೆಗಳಲ್ಲೂ ವಾಸಿಸುತ್ತಿರುವವವರಿಗೆ ಕಾನೂನು ಬದ್ಧ ರೀತಿಯಲ್ಲಿ ಹಕ್ಕು ಪತ್ರ ಹಂಚಲಾಗುವುದು ಎಂದು ತಿಳಿಸಿದ ಅವರು ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಿ ಹಲವಾರು ವರ್ಷಗಳಿಂದ ಗುರುತಿನ ಚೀಟಿ ಇಲ್ಲದೆ ವ್ಯಾಪಾರ ಮಾಡುತ್ತಿದ್ದವರು ಇನ್ನು ಮುಂದೆ ಗುರುತಿನ ಚೀಟಿಯೊಂದಿಗೆ ವ್ಯಾಪಾರ ಮಾಡುವಂತಾಗಿದೆ ಎಂದರು.

ಕರ್ನಾಟಕದಲ್ಲಿ ಪ್ರಥಮವಾಗಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಿದ್ದು ಇದರ ಪ್ರಯೋಜನ ಪಡೆಯಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಈ ಮೂಲಕ ಬಡವರಿಗೆ ಆಶೋತ್ತರ ಈಡೇರಿಸಲಾಗಿರುವ ಬಗ್ಗೆ ಹೆಮ್ಮೆಯೆನಿಸುತ್ತದೆ. ಈ ನೆರವನ್ನು ಎಲ್ಲರೂ ಸ್ವೀಕರಿಸಿ ಬದುಕನ್ನು ನೆಮ್ಮದಿಯಿಂದ ಕಳೆಯುವಂತೆ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್ ಕಾಪಿಕಾಡ್ ಮುಂತಾದವರಿದ್ದರು.