ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ದಿನಾಂಕ: 09.05.2018ರಂದು ಸಂಜೆ 03.30ಕ್ಕೆ ಸರಿಯಾಗಿ ನಗರದ ಪಾಂಡೇಶ್ವರದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಆಡಳಿತ ಕಛೆರಿಯ ಎದುರುಗಡೆ ಇರುವ ಮಾಜಿ ಪ್ರಧಾನಿ ಜವಹರಲಾಲ್ ನೆಹರುರವರ ಪ್ರತಿಮೆಯ ಬಳಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯು ಪಾಂಡೇಶ್ವರ ಮುಖ್ಯರಸ್ತೆಯ ಮೂಲಕ ಹೊಯಿಗೆಬಜಾರ್ ಧೂಮಾವತಿ ದೈವಸ್ಥಾನ, ಲಿವೆಲ್ ಜಂಕ್ಷನ್, ಮಂಗಳಾದೇವಿ, ಜೆಪ್ಪು ಮಾರ್ಕೆಟ್ ರಸ್ತೆ, ಮೊರ್ಗನ್‍ಗೇಟ್ ವೃತ್ತ ಆಗಿ ಮಾರ್ನಮಿಕಟ್ಟೆ ವೃತ್ತದ ಬಳಿ ನಡೆಯಲಿರುವುದು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.