ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ, ಮಾಜಿ ಕ್ರಿಕೆಟ್ ಕಪ್ತಾನರಾದ ಶ್ರೀ.ಮೊಹಮ್ಮದ್ ಅಜರುದ್ದಿನ್ ರವರು ನಾಳೆ ತಾ.04/05/2018 ರಂದು ಸಂಜೆ 4.00 ಗಂಟೆಗೆ ಮಂಗಳೂರಿನ ಬಂದರು ಪೋಲೀಸ್ ಠಾಣೆ ಬಳಿಯಿಂದ ಕಂಡತ್ ಪಳ್ಳಿಯ ಮೂಲಕ ಸುಲ್ತಾನ್ ಬತ್ತೇರಿಯ ವರೆಗೆ ರೋಡ್ ಶೋ ನಡೆಸಲಿರುವರು.ಈ ಸಂದರ್ಭದಲ್ಲಿ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶ್ರೀ.ಜೆ.ಆರ್.ಲೋಬೊ ಪರವಾಗಿ ಪ್ರಚಾರ ಮಾಡಲಿರುವರು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.