ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲು ಜಾರಿಗೆ ತಂದಿರುವ ನಮೂನೆ 9 ಮತ್ತು 11 ರ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಗಮನ ಸೆಳೆಯುವ ಸೂಚನೆಯನ್ನು ಕೇಳಿದ್ದಾರೆ.

ಶಾಸಕರು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸರ್ಕಾರವು ತಂದಿರುವ ಹೊಸ ವಿಧಾನದಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗಮನ ಸೆಳೆದು ಈ ಸಮಸ್ಯೆಯನ್ನು ನೀಗಿಸುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವರನ್ನು ಒತ್ತಾಯಿಸಿದರು.