ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಪರಂಪರಾಗತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು ಇದು ನಿಜಕ್ಕೂ ಮಾದರಿಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಅವರು ದಕ್ಷಿಣ ವಲಯ ಕಾಂಗ್ರೆಸ್ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮ ಆರೂರು ಶ್ರೀಪತಿ ರಾವ್ ಪೌಂಡೇಶನ್ ಸಹಯೋಗದಲ್ಲಿ ಮಂಗಳಾದೇವಿಯ ದೇವಿ ನಿಲಯದಲ್ಲಿ ನೆರವೇರಿಸಿ ಮಾತನಾಡುತ್ತಿದ್ದರು.

ಪುಸ್ತಕ ವಿತರಣೆಯನ್ನು ಪಡೆದುಕೊಂಡ ವಿದ್ಯಾರ್ಥಿಗಳು ಅದರ ಪ್ರಯೋಜ ಪಡೆದುಕೊಂಡು ಜೀವನದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿ ಪುಸ್ತಕ ವಿತರಣೆಗೆ ನೆರವು ನೀಡಿದ ಆರೂರು ಶ್ರೀಪಾತಿ ರಾವ್ ಪೌಂಡೇಶನ್ ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವು ಕೊಡಲು ಮುಂದಾಗಲಿ ಎಂದರು.

ಆರೂರು ಶ್ರೀಪತಿ ರಾವ್ ಪೌಂಡೇಶನ್ ಮುಖ್ಯಸ್ಥರಾದ ಕಿಶೋರ್ ರಾವ್, ಸಮಾರಂಭದಲ್ಲಿ ದಕ್ಷಿಣ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಅಮೀನ್, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್, ಕಾಂಗ್ರೆಸ್ ಸೇವಾದಳದ ಮಖನ್ಯಾಯಿ, ಪ್ರಭಾಕರ್ ಶ್ರೀಯಾನ್, ಉಮೇಶ್ಚಂದ್ರ ಉಪಸ್ಥಿತರಿದ್ದರು.