ಮಂಗಳೂರು: ದಕ್ಷಿಣ ವಲಯ ಇಂಟಕ್ (IಓಖಿUಅ) ಸಮಿತಿಯ ಪ್ರಥಮ ಸಭೆಯು ದಕ್ಷಿಣ ವಿಧಾನ ಸಭಾ ಶಾಸಕ ಜೆ.ಆರ್.ಲೋಬೊ ಅವರ ಕಚೇರಿಯಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಉಮೇಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಅಂಬಟಿ, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಸಲೀಂ ಜಪ್ಪು, ಸುರೇಶ್ ಶೆಟ್ಟಿ, ಪ್ರಭಾಕರ್ ಶ್ರೀಯಾನ್, ಸದಾಶಿವ ಅಮೀನ್, ದುರ್ಗಾ ಪ್ರಸಾದ್, ಟಿ.ಕೆ.ಸುಧೀರ್, ರಮಾನಂದ ಪೂಜಾರಿ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷರಾದ ಉಮೇಶ್ ದೇವಾಡಿಗ ಸ್ವಾಗತಿಸಿದರು. ದಕ್ಷಿಣ ವಲಯ ಪದಾಧಿಕಾರಿಗಳ ಆದೇಶ ಪತ್ರವನ್ನು ಶಾಸಕ ಜೆ.ಆರ್.ಲೋಬೊ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಸಂಘಟನಾತ್ಮಕ ಸಂಘಟನೆಯಿಂದ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದ ಅವರು ಈ ಸಂಘಟನೆಗೆ ತಮ್ಮಿಂದಾದ ಸಹಕಾರವನ್ನು ಕೊಡುವುದಾಗಿ ಹೇಳಿದರು.

ಸಂಘಟನೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ರಾಜ್ಯ ಇಂಟಕ್ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಅಂಬಟಿ ಮತ್ತು ಸುರೇಶ್ ಶೆಟ್ಟಿ, ಸಲೀಂ ಅವರು ಮಾತನಾಡಿದರು.

ಸುನಿಲ್ ಕುಮಾರ್ ತಂದೊಳಿಗೆ ಧನ್ಯವಾದ ಅರ್ಪಿಸಿದರು.

ನೂತನ ಪದಾಧಿಕಾರಿಗಳು: ಉಮೇಶ್ ದೇವಾಡಿಗ (ಅಧ್ಯಕ್ಷ), ಉಪಾಧ್ಯಕ್ಷರು- ಜ್ನಾನೇಷ್ ಹೊಯ್ಗೆ ಬಜಾರ್, ಮನೀಶ್ ಬೋಳಾರ್, ಸುನಿಲ್ ಕುಮಾರ್ ತಂದೊಳಿಗೆ, ರಮತುಲ್ಲಾ ಕಸಬ ಬೆಂಗ್ರೆ, ತುಕಾರಾಮ್ ಸನಿಲ್. ಪ್ರಧಾನ ಕಾರ್ಯದರ್ಶಿ- ದೀಕ್ಷಿತ್ ಶೆಟ್ಟಿ ಗೋರಿಗುಡ್ಡೆ. ಕಾರ್ಯದರ್ಶಿಗಳು- ಪ್ರೇಮನಾಥ್ ಸುವರ್ಣ, ಶಂಬು ಲಿಂಗಯ್ಯ ಗೂಡ್ ಶೆಡ್, ಮಹಾಬಲ ಪೂಜಾರಿ ಜಲ್ಲಿಗುಡ್ಡೆ, ಪ್ರದೀಪ್ ಗರೋಡಿ, ಪ್ರವೀಣ್ ಶಿವನಗರ, ಚಂದ್ರಹಾಸ್ ಕುಲಾಲ್. ಖಜಾಂಚಿ- ಮಹಮ್ಮದ್ ನವಾಜ್ ಜಪ್ಪು. ಕಾರ್ಯಕಾರಿ ಸಮಿತಿ- ಹರೀಶ್ ಅತ್ತಾವರ, ಗಂಗಾಧರ ಮರೋಳಿ, ನವೀನ್ ಎಕ್ಕೂರು, ಉಮೇಶ್ ನೂಜಿ, ದಿನಕರ್ ಸದಾಶಿವ ನಗರ, ಸಮೀಂ. ಜಪ್ಪಿನಮೊಗರು ವಲಯ ಅಧ್ಯಕ್ಷರು- ಶೇಖರ್ ಕಿಲ್ಲೆ.