ಮಂಗಳೂರು: ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳನ್ನು ಪ್ರಕಟಿಸಲಾಗಿದ್ದು ಉಪಾಧ್ಯಕ್ಷರಾಗಿ ಜ್ಯೋತಿ ಅಶೋಕ್, ಸುನಿತ ಸಾಲ್ಯಾನ್, ಕವಿತಾ ಶೆಟ್ಟಿ ಹಾಗೂ ಶ್ರೀಮತಿ ಝೋಹರ ಅವರು ಆಯ್ಕೆಯಾಗಿದ್ದಾರೆ. ಈ ನೇಮಕಾತಿಯನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಅವರ ಆದೇಶದಂತೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ.ಆರ್‍.ಲೋಬೊ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ಅವರ ಶಿಫಾರಸಿನಂತೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ. ರಾವ್ ಅವರು ನೇಮಕ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿ ವಿದ್ಯಾ ಬಾಬುಗುಡ್ಡೆ ಅವರನ್ನು ಆಯ್ಕೆಮಾಡಲಾಗಿದೆ. ಶಾಲಿನಿ ಪ್ರಕಾಶ್, ಶಕುಂತಳ ಕರ್ಕೇರ, ಶ್ರೀಮತಿ ಫ್ಲೋರ ಹಾಗೂ ಅನಿತಾ ರಸ್ಕೀನ್ಹ ಅವರನ್ನು ಕಾರ್ಯದರ್ಶಿಗಳಾಗಿ ಮಾಡಲಾಗಿದೆ. ಕೋಶಾಧಿಕಾರಿಯಾಗಿ ಸರಳಾ ಕರ್ಕೇರ ಅವರನ್ನು ನೇಮಕ ಮಾಡಲಾಗಿದೆ. ಗೀತಾ ಸುವರ್ಣ, ವಿಕ್ಟೋರಿಯ, ಮೋಹಿನಿ ಗಟ್ಟಿ. ಮೇಬಲ್ ನೊರೊನ್ಹಾ ಮತ್ತು ಪುಷ್ಪಲತ ಅವರನ್ನು ಸಂಘಟನಾ ಕಾರ್ಯದರ್ಶಿಗಳನ್ನಾಗಿ ನಿಯೋಜಿಸಲಾಗಿದೆ.

ಪವಿತ್ರ ಕರ್ಕೇರ, ನಸೀಮ್, ಗೀತಾ ಪ್ರವೀಣ್, ಸ್ವರ್ಣಲತಾ ಬೆಂಗರೆ, ಸಹಾನ, ರತ್ನ ಬಜಾಲ್, ಮೇಜಿ, ವಿಮಲಾ ಯು.ಅಮೀನ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ ವಿಶೇಷ ಆಹ್ವಾನಿತರಾಗಿ ಜೆಸಿಂತ್ ವಿಜಯ ಅಲ್ಫ್ರೆಡ್, ಕು.ಅಪ್ಪಿ, ಆಶಾ ಡಿಸಿಲ್ವ, ರತಿಕಲಾ, ಕವಿತಾ ವಾಸು, ಶೈಲಜಾ, ಸುಮಯ್ಯ, ವಿಜಯಲಕ್ಷ್ಮಿ, ಭಾರತಿ ಬಿ.ಎಮ್, ವಿಧ್ಯಾ ಆರ್.ಭಟ್, ಶೋಭಾ ಕೇಶವ, ಸರಿತಾ ಬೆಂಗ್ರೆ, ನಸೀಮ, ಎಲಿಜಬೆತ್ ಪಿರೇರಾ ಹಾಗೂ ತೆರಜಾ ಪಿಂಟೊ ಅವರನ್ನು ನೇಮಕ ಮಾಡಲಾಗಿದೆ.