ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಕೆ.ಬಾಲಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷರಾದ ಜೆ.ಸದಾಶಿವ ಅಮೀನ್ ಅವರ ಸಭೆಯಲ್ಲಿದ್ದ ಸದಸ್ಯರನ್ನು ಆತ್ಮಿಯವಾಗಿ ಸ್ವಾಗತಿಸಿದರು. ಉಪಸ್ಥಿತರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬ್ಲಾಕ್ ನ ಗಮನಕ್ಕೆ ತಂದು ಈ ಬಗ್ಗೆ ಸಂಬಂಧ ಪಟ್ಟ ಸಚಿವರು ಹಾಗು ಶಾಸಕರಿಗೆ ತಿಳಿಸುವಂತೆ ಒತ್ತಾಯಿಸಿದರು.

ಪ್ರಮುಖವಾಗಿ ಬೋಳಾರ ಲಿವೆಲ್ ನ್ ನಿಂದ ಜೆಪ್ಪು ಮಾರ್ಕೇಟ್ ರಸ್ತೆಗೆ ಕಾಂಕ್ರಿಟ್ ಮಾಡಲು ಗುದ್ದಲಿ ಪೂಜೆ ನಡೆದು ವರ್ಷಗಳು ಕಳೆದರೂ ಕೆಲಸವಾಗಲಿಲ್ಲ. ಈ ಬಗ್ಗೆ ಸ್ಥಳೀಯರು ದೂರಿಕೊಳ್ಳತ್ತಿದ್ದಾರೆ.ಜೆಪ್ಪಿನಮೊಗರು ವಾರ್ಡಿನಲ್ಲಿ ಆಗಾಗ ವಿದ್ಯುತ್ ಸಮಸ್ಯೆ ಇದ್ದು ಇದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಮಿಲಾಗ್ರಿಸ್ ನಿಂದ ರೈಲ್ವೇ ಸ್ಟೇಶನ್ ವರೆಗಿನ ರಸ್ತೆಯನ್ನು ಅಗಲೀಕರಣ ಮಾಡಿದರೆ ಉತ್ತಮ ಎಂದು ಸಭೆಯಲ್ಲಿ ಒತ್ತಾಯಿಸಿದರು.ಕೆಲವೊಂದು ಪ್ರದೇಶಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು. ಅಧ್ಯಕ್ಷರು ತಮ್ಮ ಅಧ್ಯಕ್ಷಿಯ ಭಾಷಣ ದಲ್ಲಿ ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಹೇಳಿದರು.

ಕೆಪಿಸಿಸಿ ಆದೇಶದಂತೆ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರ ನಿರ್ದೇಶನದಂತೆ ಎಲ್ಲ ವಾರ್ಡ್ ಗಳಲ್ಲಿ ಪಕ್ಷ ವನ್ನು ಬಲಪಡಿಸಲು ವಾರ್ಡ್ ಸಭೆ ಮಾಡಿ ಬೂತ್ ಅಧ್ಯಕ್ಷರ ಹಾಗೂ ಬಿಎಲ್ ಎ ಗಳ ನೇಮಕಾತಿ ಮಾಡಿ ತಕ್ಷಣ ಪಟ್ಟಿಯನ್ನು ನೀಡಬೇಕೆಂದು ತಿಳಿಸಿದರು. ಮುಂಚೂಣಿ ಘಟಕಗಳನ್ನು ವಾರ್ಡ್ ಗಳಲ್ಲಿ ಬಲಪಡಿಸಲು ಮಹಿಳಾ ಘಟಕ, ಕಾರ್ಮಿಕ ಘಟಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗಳ ಸಭೆಗಳನ್ನು ಆಯೋಜಿಸುವಂತೆ ವಾರ್ಡ್ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರಲ್ಲಿ ವಿನಂತಿಸಿದರು.

ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 162 ಜನ್ಮದಿನಾಚರಣೆ ಆಚರಿಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದವರು ವಾಲ್ಟರ್ ಲೋಬೊ, ಶಾಫಿ ಅಹ್ಮದ್, ಮಹಿಳಾ ಘಟಕ ಅಧ್ಯಕ್ಷರಾದ ನಮಿತ ಡಿ. ರಾವ್, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾದ ಅಬೂಬಕರ್, ಸೇವೆ ದಳದ ಅಧ್ಯಕ್ಷಾರಾದ ಮಹ್ಮದ್ ಹುಸೇನ್, ಕೀಸಾನ್ ಘಟಕ ಅಧ್ಯಕ್ಷರಾದ ಭರತೇಶ್ ಅಮೀನ್, ವಾರ್ಡ್ ಅಧ್ಯಕ್ಷರಾದ ಹೇಮಂತ್ ಗರೋಡಿ, ಭರತ್ ರಾಮ್, ರಫಿಕ್ ಕಣ್ಣೂರು, ಫಾರೂಕ್ ಬೆಂಗ್ರೆ, ಸದಸ್ಯರಾದ ಮೋಹನ್ ದಾಸ್ ಕೊಟ್ಟಾರಿ, ನವೀನ್ ಸ್ಟೀವನ್, ಅನಿಲ್ ರಸ್ಕಿನ, ದಿನೇಶ್ ರಾವ್, ಸೀತಾರಾಮ್.

ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಬೋಳಾರ್ ಧನ್ಯವಾದ ಸಮರ್ಪಿಸಿದರು.