ಮಂಗಳೂರು: ಮಳೆ ನೀರು ಸರಾಗವಾಗಿ ಹರಿದು ಹೋಗದೆ ಜನರಿಗೆ ಸಮಸ್ಯೆಯುಂಟಾದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಶಾಸಕ ಜೆ.ಆರ್.ಲೋಬೊ ಅವರು ಯಾವುದೇ ಕಾರಣಕ್ಕೂ ತೋಡುಗಳಲ್ಲಿ ನೀರು ನಿಲ್ಲಬಾರದು ಮತ್ತು ಆಗಾಗ ತೋಡುಗಳನ್ನು ಶುಚಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ಕದ್ರಿ ಕಚೇರಿಯಲ್ಲಿ ಮಳೆಯಿಂದಾದ ಬಗ್ಗೆ ಸಮಾಲೋಚನೆ ಸಭೆ ನಡೆಸಿ ಜಾರ ಅಹವಾಲು ಸ್ವೀಕರಿ ಮಾತನಾಡಿ ತೋಡುಗಳನ್ನು ಅಗಲೀಕರಣಗೊಳಿಸಬೇಕು ಮತ್ತು ತೋಡುಗಳನ್ನು ನೋಡಿಕೊಂಡು ಒಳಚರಂಡಿ ಸ್ವಚ್ಛತೆಯನ್ನು ಮಾಡಬೇಕು ಎಂದು ಸೂಚಿಸಿದರು.

ಅನಧಿಕೃತ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವ ಬಗ್ಗೆ ಜನರು ಗಮನ ಸೆಳೆದಾಗ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳು ಈ ಸಮಸ್ಯೆಗಳನ್ನು ನೋಡಿಕೊಳ್ಳುವಂತೆ ತಿಳಿಸಿ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು.

ರೈಲ್ವೇ ಸೇತುವೆಗೆ ಮಧ್ಯದಲ್ಲಿ ಹಾಕಿರುವ ಪಿಲ್ಲರ್ ನಿಂದ ಮಳೆ ನೀರನ್ನು ತಡೆದು ಹಿಡಿಯುವ ಸಮಸ್ಯೆಗಳ ಬಗ್ಗೆಯೂ ಶಾಸಕರು ಅಧಿಕಾರಿಗಳು ತುರ್ತಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.

ಕೆ.ಎಂ.ಸಿ ಆಸ್ಪತ್ರೆ ಹಿಂದುಗಡೆ ಮಳೆಯಿಂದಾಗಿ ಮನೆಗಳು ಜಲಾವೃತವಾದ ಬಗ್ಗೆ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸಿದ ಶಾಸಕರು ಇಂಥ ಸಮಸ್ಯೆ ಮುಂದೆ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.

ಈ ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ನಗರಪಾಲಿಕೆ ಸದಸ್ಯರು, ಅಧಿಕಾರಿಗಳು, ಸಮಸ್ಯೆ ಎದುರಿಸಿದ ಸಾರ್ವಜನಿಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.