ಮಂಗಳೂರು: ತುಳುನಾಡ್ ಫ್ರೆಂಡ್ಸ್ ಸರ್ಕಲ್ ಕೃಷ್ಣಕುಟೀರ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕಂಕನಾಡಿ ಮಂಗಳೂರು ಇದರ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ, ದಂತ ವೈದ್ಯಕೀಯ ತಪಾಸಣೆ ಹಾಗೂ ಮಲೇರಿಯಾ ತಪಾಸಣಾ ಶಿಬಿರ ಜನವರಿ 8 ರಂದು ಜರಗಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಈ ಶಿಬಿರವನ್ನು ಡಾ.ರೋಶನ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಹಾನಗರಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ , ಪ್ರಭಾಕರ್ ಶ್ರೀಯಾನ್ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ದೇವೇಂದ್ರ, ತುಳುನಾಡ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಕೃತಿನ್ ಕುಮಾರ್, ಆಯುಷನ ವೈದ್ಯರಾದ ಡಾ.ದಿನೇಶ್, ಜಿಲ್ಲಾ ಆಯುಷ ಅಧಿಕಾರಿ ಮೊಹಮದ್ ಇಕ್ಬಾಲ್, ಎ.ಜೆ. ಆಸ್ಪತ್ರೆಯ ವಿಕ್ರಮ್ ಭಟ್ ಮುಂತಾದವರು ಇದ್ದರು.

ನಾಗೇಶ್ ಸಾಲಿಯಾನ್ ಅವರು ಸ್ವಾಗತಿಸಿದರು. ಈ ಶಿಬಿರದಲ್ಲಿ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ, ಎ.ಜೆ ದಂತ ವೈದ್ಯಕೀಯ ಕಾಲೇಜು, ಆಯುಷ್ ಇಲಾಖೆ ಮಂಗಳೂರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಎಕ್ಕೂರು, ಮಹಾನಗರಪಾಲಿಕೆಯ ಆರೋಗ್ಯ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಭಾಗವಹಿಸಿದ್ದವು. ಶಿಬಿರದಲ್ಲಿ ಸುಮಾರು 200 ಜನ ರಕ್ತದಾನ ಮಾಡಿದರು. ಸುಮಾರು 500 ಮಂದಿ ಶಿಬಿರಕ್ಕೆ ಬಂದು ವೈದ್ಯಕೀಯ ತಪಾಸಣೆ ಪಡೆದುಕೊಂಡರು.