ಮಂಗಳೂರು: ಟೆಂಡರ್ ಕರೆದು ಮೂರು ತಿಂಗಳಾದರೂ ವರ್ಕ್ ಆರ್ಡರ್ ಕೊಡಲು ವಿಳಂಭ ಮಾಡಿದರೆ ಕೆಲಸ ಆಗುವುದು ಯಾವಾಗ ಎಂದು ಶಾಸಕ ಜೆ.ಆರ್.ಲೋಬೊ ಅವರು ತೀವೃ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಮಂಗಳೂರು ನಗರ ಪಾಲಿಕೆ ಕಚೇರಿಯಲ್ಲಿ ಪ್ರೀಮಿಯ ಎಫ್ ಎ ಆರ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಯಾವ ಕಾಮಗಾರಿಗಳಿಗೂ ವರ್ಕ್ ಆರ್ಡ್ ರ ಕೊಟ್ಟಿಲ್ಲ. ಏನೂ ಕಷ್ಟ ಎಂಬುದನ್ನು ಹೇಳಿ. ಟೆಂಡರ್ ಕರೆದು ವರ್ಕ್ ಆರ್ಡ್ ರ ಕೊಡುವುದು ಯಾಕೆ ವಿಳಂಭವಾಗಿದೆ. ಹೀಗೆ ಮಾಡಿದರೆ ಕೆಲಸ ಮುಗಿಸುವುದು ಯಾವಾಗ ಎಂದು ಪ್ರಶ್ನಿಸಿದರು.

ಟಿಪಿಒ ಗಳು ಕೆಲಸ ಮಾಡುವುದು ವಿಳಂಭವಾಗುತ್ತಿದೆ. ಎಲ್ಲವನ್ನೂ ಕಾನೂನಿನಂತೆಯೇ ನೋಡಬೇಕು ನಿಜ, ಆದರೆ ಕೆಲವು ಸಲ ಕಾನೂನನ್ನು ಮೀರಿ ಜನರಿಗೆ ಉಪಯೋಗವಾಗುವುದನ್ನು ನೋಡಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಕಿವಿ ಮಾತು ಹೇಳಿದರು.

ಶಾಸಕರು ಕಾಮಗಾರಿಗಳನ್ನು ವಿವರವಾಗಿ ಪ್ರಗತಿ ಪರಿಶೀಲನೆ ಮಾಡಿದರು. ರಸ್ತೆ ಅಗಲೀಕರಣಗಳನ್ನು ಮಾಡುವಾಗ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಜಾಗಬಿಟ್ಟುಕೂಡುವ ವಿಚಾರದಲ್ಲಿ ಜನರೂ ಕೂಡಾ ಮನಸು ಬದಲಿಸಬೇಕು ಎಂದು ಸಲಹೆ ಮಾಡಿದರು.

ಇನ್ನೂ ಮುಂದೆ ರಸ್ತೆ ಅಗಲೀಕರಣ ಅಥವಾ ತೋಡುಗಳ ನಿರ್ಮಾಣ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕಾಂಕ್ರೀಟ್ ರಸ್ತೆ ಮಾಡುವವರೇ ಯುಜಿಡಿ ಕೆಲಸಗಳನ್ನೂ ನೋಡಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಸಲಹೆ ಮಾಡಿದರು. ಸಭೆಯಲ್ಲಿ ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್ ಕಾಪಿಕಾಡ್, ಆಯುಕ್ತ ನಜೀರ್ ಅಹ್ಮದ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.