ಮಂಗಳೂರು ಮಹಾನಗರಪಾಲಿಕೆ ನಿಧಿಯಿಂದ ಮಂಜುರಾದ ರೂ.45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಜೆಪ್ಪು ಮಾರ್ಕೆಟ್ ಬಳಿಯ ಮುಖ್ಯ ರಸ್ತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್ ಲೋಬೊ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ತಾ.07.03.2018 ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ರತಿಕಲಾ, ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮಿನ್, ವಾರ್ಡ್ ಅಧ್ಯಕ್ಷ ಬೆನೆಟ್ ಡಿಮೆಲ್ಲೊ, ರಮಾನಂದ ಪೂಜಾರಿ, ಸೀತರಾಮ, ಶಾಫಿ ಅಹಮ್ಮದ್, ಸತೀಶ್ ಶೆಟ್ಟಿ, ಮೊಹಮ್ಮದ್ ಆಲಿ, ನವೀನ್ ಶೇಟ್ಟಿ, ಉದಯ ಬೋಳಾರ್, ರಾಜ ಮೊದಲಾದವರು ಉಪಸ್ಥಿತರಿದ್ದರು.