ದಿನಾಂಕ 10.02.2018 ರಂದು ಜೆಪ್ಪು ಮಜಿಲ ಹತ್ತು ಸಮಸ್ತರ ಆಶ್ರಯದಲ್ಲಿ ಜೆಪ್ಪು ಮಜಿಲ ಮೈದಾನದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯ ಶ್ರೀ ದೇವಿ ಮಹಾತ್ಮೆ ಪ್ರಸಂಗ ಜರಗಿತ್ತು. ಈ ಸಂದರ್ಭದಲ್ಲಿ ಜೆಪ್ಪು ಮಜಿಲ ಹತ್ತು ಸಮಸ್ತರ ನಿಧಿಯಿಂದ ರೂ. ಒಂದು ಲಕ್ಷ ಚೆಕ್ಕನ್ನು ಯಕ್ಷ ಧ್ರುವ ಪಟ್ಲ ಪೌಂಡೇಶನ್ ಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್.ಲೋಬೊರವರು ಹಸ್ತಾಂತರಿಸಿದರು. ಅದೇ ರೀತಿ ಕಟೀಲು ಮೇಳದ ಕಲಾವಿದರ ಮತ್ತು ಕೆಲಸಗಾರರ ಕ್ಷೇಯಾಭಿವೃದ್ಧಿ ಸಮಿತಿಗೆ ರೂ. ಒಂದು ಲಕ್ಷ ಚೆಕ್ಕನ್ನು ಹಸ್ತಾಂತರಿಸಿದರು.

ಜೆಪ್ಪು ಮಜಿಲ ಯಕ್ಷಗಾನ ಚೆಕ್ ಡಿಸ್ಟ್ರಿಬ್ಯೂಷನ್