ಮಂಗಳೂರು: ಜಲಸಂಪನ್ಮೂಲ ಹೆಚ್ಚಿಸಿ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಅಳಪೆಯಲ್ಲಿ ಬೈರಾಡಿಕೆರೆಯನ್ನು 3.37 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸಣ್ಣನೀರಾವರಿ ಇಲಾಖೆಯಿಂದ ಅಭಿವೃದ್ಧಿಪಡಿಸಲು ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಕೆರೆಗಳನ್ನು ಅಭಿವೃದ್ಧಿಗೊಳಿಸಿ ಪರಿಸರದ ಜನರಿಗೆ ಉಪಯುಕ್ತವಾಗುವಂತೆ ಮತ್ತು ಸಂಜೆಹೊತ್ತು ಜನರಿಗೆ ತಿರುಗಾಡಲು ನೆರವಾಗುವುದು. ಮುಂಜಾನೆ ಜಾಗಿಂಗ್ ಮಾಡಲು ಹಾಗೂ ಬೋಟಿಂಗ್ ವ್ಯವಸ್ಥೆಯನ್ನು ಕೂಡಾ ಆರಂಭಿಸಲಾಗುವುದು ಎಂದರು. ಕೆರೆಗಳಿಗೆ ತ್ಯಾಜ್ಯ ವಸ್ತುಗಳನ್ನು ಬಿಟ್ಟರೆ ನಿರ್ಧಕ್ಷೀಣವಾಗಿ ಕಾನೂನು ಕ್ರಮ ಜರಗಿಸುವುದಾಗಿ ಹೇಳಿದ ಅವರು ಕೆರೆಗಳನ್ನು ಒತ್ತುವರಿ ಮಾಡಿದ್ದರೆ ಕೂಡಲೇ ತೆರಳುಗೊಳಿಸಲಾಗುವುದು. ಸಾರ್ವಜನಿಕರು ಯಾರೂ ಬೇಸರ ಪಡಬಾರದು ಎಂದು ಜೆ.ಆರ್.ಲೋಬೊ ಮನವಿ ಮಾಡಿದರು.

ಇದೇ ರೀತಿ ಮಂಗಳೂರಲ್ಲಿ ಈಗಾಗಲೇ 8 ಕೆರೆಗೆಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಭಟ್ರಕೆರೆ, ಕೆಮ್ಮಾರು ಕೆರೆ, ಗುಜ್ಜರಕೆರೆ, ಗುಜ್ಜರಕೆರೆ, ಕದ್ರಿಕೆರೆಗಳೂ ಕೂಡಾ ಅಭಿವೃದ್ಧಿಯಾಗುತ್ತಿವೆ ಎಂದು ತಿಳಿಸಿದರು. ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಉಪಮೇಯರ್ ರಜನೀಶ್ ಕಾಪಿಕಾಡ್, ಕಾರ್ಪೊರೇಟರ್ ಪ್ರಕಾಶ್, ಸಭಿತಾ ಮಿಸ್ಕಿತ್, ಭೂನ್ಯಾಯ ಮಂಡಲಿ ಸದಸ್ಯ ಡೆನ್ನೀಸ್ ಡಿಸಿಲ್ವಾ, ಕೆ.ಎಸ್.ಆರ್.ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಹಮೀದ್ ಕಣ್ಣೂರ್, ಶೋಭಾ ಕೇಶವ, ಡಾ.ಅಣ್ಣಯ್ಯ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.