ಮಂಗಳೂರು: ಜನರಿಗೆ ಉಪಯೋಗವಾಗಲೆಂದು 55 ಲಕ್ಷ ರೂಪಾಯಿ ವೆಚ್ಚದಲ್ಲಿ ಭಟ್ರ ಕಟ್ಟ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು ಜನರು ಈ ಕಿಂಡಿ ಅಣೆಕಟ್ಟನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಭಟ್ರ ಕಟ್ಟು ಕಿಂಡಿ ಅಣೆಕಟ್ಟು ಮತ್ತು ಪರಂಬೋಕು ತೋಡಿನ ದಡಾ ಸಂರಕ್ಷಣಾ ಕಾಮಗಾರಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆಯ ನೆರವಿನಲ್ಲಿ ಮಾಡಲಾಗಿದ್ದು ಇದರ ಸದ್ಬಳಕೆ ಮುಖ್ಯವಾಗಿದೆ. ಜನರ ಬೇಡಿಕೆಯ ಮೇರೆಗೆ ಕೈಗೊಂಡ ಕಾಮಗಾರಿ ಇದಾಗಿದ್ದು ಇದರೊಂದಿಗೆ ಪರಂಬೋಕು ತೋಡಿನ ದಡ ಸಂರಕ್ಷಣೆಯನ್ನು ಮಾಡಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಈ ಪ್ರದೇಶದ ನೂರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ತೋಡಿ ಬದಿಯ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಶಾಸಕರು ಮನವಿಗೆ ಸ್ಪಂದಿಸಿ ಕೂಡಲೇ ಅಧಿಕಾರಿಗಳು ರಸ್ತೆ ನಿರ್ಮಿಸುವಂತೆ ಹೇಳಿದರಲ್ಲದೇ ಈ ಸಂಬಂಧ ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಸೂಚಿಸಿದರು.

ಶಾಸಕ ಜೆ.ಆರ್.ಲೋಬೊ ಅವರು ಇದೇ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟಿಗೆ ಭಾಗಿನ ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷ ಡೆನ್ನಿಸ್ ಡಿ’ಸಿಲ್ವಾ, ಹೆನ್ರಿ ಡಿ’ಸೋಜ, ನಾಬರ್ಟ ಡಿ’ಸೋಜ, ದಾನಿ ಡಿಸಿಲ್ವಾ, ಮೈಕಲ್ ಕ್ರಾಸ್ತಾ, ಕಾಪೆರ್Çರೇಟರ್ ಬಿ.ಪ್ರಕಾಶ್ ಉಪಸ್ಥಿತರಿದ್ದರು.

ಜನರು ಕಿಂಡಿ ಅಣೆಕಟ್ಟಿನ ಸದ್ಭಳಕೆ ಮಾಡಿಕೊಳ್ಳಿ: ಶಾಸಕ ಜೆ.ಆರ್.ಲೋಬೊ