ನಗರದ ಅತ್ಯಂತ ಪುರಾತನ ಕೆರೆಗಳೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ ಪೈಪುಗಳು ಒಡೆದು ಹೋಗಿದುದ್ದರಿಂದ ಅದರ ನೀರು ಕೆರೆಗೆ ಹೋಗಿ ನೀರು ಕಶ್ಮಲಗೊಂಡಿದೆ. ಅದಲ್ಲದೇ ಡ್ರೈನೇಜ್ ನೀರಿನ ದುರ್ನಾತದಿಂದ ಜನರು ಜೀವನವನ್ನು ಸಾಗಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಈಗಾಗಲೇ ಆ ಪ್ರದೇಶದಲ್ಲಿ ಹೊಸ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ಕೈಗೆತ್ತಿಗೊಂಡಿದೆ. ಇಂದು ತಾ.20.01.2018ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್.ಲೋಬೊರವರು ಕಾಮಗಾರಿ ಪರಿಶೀಲನೆ ಮಾಡಿ ಪವಿತ್ರವಾದ ಗುಜ್ಜರಕೆರೆಯನ್ನು ಅಭಿವೃದ್ಧಿಪಡಿಸುವ ಇರಾದೆಯಿಂದ ಈಗಾಗಲೇ ಪಾಲಿಕೆಯ ವತಿಯಿಂದ ಸುಮಾರು ರೂ.2.46 ಕೋಟಿ ಹೊಸ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮುಳಿಹಿತ್ಲು ವೆಟ್ ವೆಲ್ ನಿಂದ ಹಿಡಿದು ಅರೆಕೆರೆಬೈಲ್, ಎಂಪಸಿಸ್ ಕಾಲ್ ಸೆಂಟರ್, ಕೆರೆಯ ಆಸುಪಾಸಿನ ಪ್ರದೇಶಗಳಿಗೆ ಪ್ರಾರಂಭಿಸಲಾಗಿದೆ. ಸುಮಾರು 2,200 ಮೀಟರ್ ಉದ್ದವಿರುವ ಈ ಕಾಮಗಾರಿಯು ಈವರೆಗೆ 920 ಮೀಟರ್ ತನಕ ಪೂರ್ಣಗೊಳಿಸಲಾಗಿದೆ. 12 ಫೀಟ್ ಆಳದಲ್ಲಿ 450mm ವ್ಯಾಸವಿರುವ ಡಿ1 ಪೈಪ್ ಗಳನ್ನು ಮುಂದಿನ 60 ವರ್ಷಗಳ ದೂರ ದೃಷ್ಠಿಯಲ್ಲಿ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಕೆಲಸ ಮಾಡಲು ಬಹಳಷ್ಟು ಕಷ್ಟವಾಗಿದ್ದರಿಂದ ಕಾಮಗಾರಿಯು ಸ್ವಲ್ಪ ವಿಳಂಬವಾಗಿತ್ತು. ಮನೆಗಳಿರುವ ಒಳಪ್ರದೇಶದ ಸುಮಾರು 700 ಮೀಟರ್ ಉದ್ದಕ್ಕೆ ಪಿವಿಸಿ ಪೈಪ್ ಗಳನ್ನು ಅಳವಡಿಸಲಾಗುತ್ತದೆ. ಸುಮಾರು 116 ಆಳುಗುಂಡಿಗಳ ಪೈಕಿ ಈಗಾಗಲೇ 57 ಆಳುಗುಂಡಿಗಳ ಕಾಮಗಾರಿಯು ಪೂರ್ಣಗೊಂಡಿದೆ. ದಸರಾ ಮಹೋತ್ಸವದ ಹಾಗೂ ದೀಪೋತ್ಸವದ ವೇಳೆ ದೇವಸ್ಥಾನದ ರಥ ಈ ಕೆರೆಯ ಸಮೀಪವಿರುವ ಕಟ್ಟೆಗೆ ಬಂದು ಪೂಜೆ ಮಾಡುವ ಸುಸ್ಥಿತಿಯಿದೆ. ಅದಲ್ಲದೇ ಸ್ಥಳೀಯ ಜನರ ಭಾವನೆಗಳಿಗೆ ಪೂರಕವಾಗಿ ಕಾಮಗಾರಿಯನ್ನು ಮಾಡಲಾಗುವುದು ಒಟ್ಟಾರೆಯಾಗಿ ಗುಜ್ಜರಕೆರೆಯನ್ನು ಕೇಂದ್ರಿಕೃತವಾಗಿ ಈ ಎಲ್ಲಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ರತಿಕಲಾ, ಮೆಸ್ಕಾಂ ನಿರ್ದೇಶಕ ಸದಾಶಿವ ಅಮಿನ್, ರಮಾನಂದ ಪೂಜಾರಿ, ಬೆನೆಟ್ ಡಿಮೆಲ್ಲೊ, ಪಾಲಿಕೆಯ ಇಂಜಿನಿಯರ್ ನಿತ್ಯಾನಂದ, ಗುತ್ತಿಗೆದಾರರಾದ ಪುರುಷೋತ್ತಮ, ಪ್ರದೀಪ್ ರವರು ಉಪಸ್ಥಿತರಿದ್ದರು.