ಮಂಗಳೂರು ಮಹಾನಗರ ಪಾಲಿಕೆ ವಾರ್ಡು ಸಂಖ್ಯೆ 57ನೇ ಹೊಯಿಗೆ ಬಜಾರ್ ವಾರ್ಡು ವ್ಯಾಪ್ತಿಯಲ್ಲಿರುವ ಗುಜ್ಜರಕೆರೆ, ಅರೆಕೆರೆಬೈಲು ಆಸುಪಾಸುಗಳಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಜೆ.ಆರ್. ಲೋಬೊರವರು ಇಂದು ತಾರೀಕು 06.05.18 ರಂದು ಬೆಳಿಗ್ಗೆ ಬಿರುಸಿನ ಮತಯಾಚನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರ ದಂಡು ಅಭ್ಯರ್ಥಿ ಲೋಬೊ ರವರಿಗೆ ಸಾತ್ ನೀಡಿದರು. ಪರಿಸರದ ಉದ್ದಕ್ಕೂ ಲೋಬೋ ರವರನ್ನು ಅಲ್ಲಿನ ಜನತೆ ಬರಮಾಡಿಕೊಂಡು ಮುಂದಿನ ಬಾರಿಯೂ ನೀವು ಜಯಶಾಲಿಯಾಗುತ್ತೀರಿ ಎಂದು ಆಶೀರ್ವದವನ್ನಿತ್ತರು. ಇನ್ನಷ್ಟು ಕೆಲಸ ಕಾರ್ಯಗಳು ನಿಮ್ಮಿಂದ ನಗರಕ್ಕೆ ಹರಿದು ಬರಲಿ ಎಂದು ಆಶಿಸಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಲೋಬೊ ರವರು, ಈಗಾಗಲೇ ಗುಜ್ಜರಕೆರೆ ಪರಿಸರದಲ್ಲಿ ಒಳಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದೆ. ಬಹಳ ವರ್ಷಗಳಿಂದ ಜನರು ಇದರ ಬೇಡಿಕೆಯನ್ನಿಟ್ಟಿದ್ದರು. ಅರೆಕೆರೆಬೈಲು ಒಳಭಾಗದ ರಸ್ತೆಗಳಿಗೆ ಈಗಾಗಲೇ ಕಾಂಕ್ರೀಟು ಕಾಮಗಾರಿ ಪೂರ್ಣಗೊಂಡಿದೆ. ಜನರು ಬಹಳ ನಿರೀಕ್ಷೆಯನ್ನಿಂಟುಕೊಂಡಿದ್ದಾರೆ. ಅವರ ನಿರೀಕ್ಷೆಯನ್ನು ಹಂತ ಹಂತವಾಗಿ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಕಾರ್ಪೊರೇಟರ್ ಗಳಾದ ಕವಿತಾ ವಾಸು, ರತಿಕಲಾ ಹಾಗೂ ಪಕ್ಷದ ಮುಖಂಡರುಗಳಾದ ಪ್ರಭಾಕರ ಶ್ರೀಯಾನ್, ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ರಮಾನಂದ ಪೂಜಾರಿ, ಟಿ.ಕೆ. ಸುಧೀರ್, ದುರ್ಗಾಪ್ರಸಾದ್, ಹುಸೈನ್ ಬೋಳಾರ, ಬೆನೆಟ್ ಡಿ. ಮೆಲ್ಲೊ, ಭಾಸ್ಕರ ರಾವ್, ಸಂದೀಪ್ ಉಳ್ಳಾಲ, ಮನೀಶ್ ಬೋಳಾರ, ಸೀತಾರಾಮ್, ಉದಯ ಬೋಳಾರ್, ಗಣೇಶ್ ಅರೆಕೆರೆಬೈಲು ಮೊದಲಾದವರು ಉಪಸ್ಥಿತರಿದ್ದರು.

ಗುಜ್ಜರಕೆರೆ, ಅರೆಕೆರೆಬೈಲು ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಮತಯಾಚನೆ.

ಗುಜ್ಜರಕೆರೆ, ಅರೆಕೆರೆಬೈಲು ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರವರಿಂದ ಬಿರುಸಿನ ಮತಯಾಚನೆ.