ಬೆಳೆಯುತ್ತಿರುವ ಮಂಗಳೂರಲ್ಲಿ ಕೌಶಲ್ಯಾಭಿವೃದ್ಧಿ ವೃದ್ಧಿಸುವ ವಿನೂತನ ಕಾರ್ಯಗಾರ ಅಸ್ಥಿತ್ವಕ್ಕೆ ಬಂದಿದೆ. ಆದರೆ ಈ ಕಾರ್ಯಗಾರವನ್ನು ಉಪಯೋಗಿಸುವ ನಿಟ್ಟಿನಲ್ಲಿ ಇನ್ನಷ್ಟೇ ಪ್ರಸಿದ್ಧಿ ಬರಬೇಕಿದೆ. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಈ ಕಾರ್ಯಾಗರವನ್ನು ಜಾರಿಗೆ ತರುತ್ತಿದೆ. ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಒದಗಿಸಬೇಕಾದ ಅಗತ್ಯ ದಾಖಲೆಗಳು ಎಸ್ ಎಸ್ ಎಲ್ ಸಿ ಮಾರ್ಕ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಅತ್ಯಧಿಕ ವಿದ್ಯಾರ್ಹತೆಯ ಮಾರ್ಕ್ ಕಾರ್ಡ್, 4 ಪಾಸ್ ಪೋರ್ಟ್ ಸೈಜ್ ಫೋಟೊ ಮಾತ್ರ. ಇವಿಷ್ಟು ದಾಖಲಾತಿಗಳನ್ನು ಪೋರೈಸಬೇಕು.
ಇಲ್ಲಿ ಕೊಡಲಾಗುವ ಕೋರ್ಸ್ ಗಳು ಅಡ್ವಾನ್ಸಡ್ ವೆಲ್ಡಿಂಗ್, ಇನ್ ಫಾರ್ಮೇಶನ್ ಟೆಕ್ನಾಲಜಿ, ಟ್ಯಾಲಿ ಇಪಿಆರ್ ಪಿ 9, ರೆಫ್ರಿಜರೇಶನ್ ಹಾಗೂ ಏರ್ ಕಂಡೀಷನಿಂಗ್. ಮೇಲಿನ ಮೂರು ಕೋರ್ಸಗಳು 2015 ರಿಂದ ಆರಂಭವಾಗಿದ್ದು ಇಲ್ಲಿಯತನಕ 1248 ಜನ ತರಬೇತಿ ಪಡೆದಿದ್ದಾರೆ. ಆದರೆ ಅವರಿಗೆಲ್ಲರಿಗೂ ಉದ್ಯೋಗ ಸಿಕ್ಕಿದೆ ಎನ್ನುವುದು ಈ ಸಂಸ್ಥೆಯ ಹಿರಿತನ.

ಇಂಥ ಸಂಸ್ಥೆಯೊಂದು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದು ಕರ್ನಾಟಕ ರಾಜ್ಯ ಸರ್ಕಾರದ ಸಾರ್ಥ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಎನ್ನುವುದು ಇಲ್ಲಿ ಗಮನಾರ್ಹ. ಇದು ಐಟಿಐ ಸಂಸ್ಥೆಯಡಿಯಲ್ಲಿ ಕದ್ರಿಯಲ್ಲಿ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲ್ಲೆಯಲ್ಲಿ ಏಕೈಕ ಕರ್ನಾಟಕದಲ್ಲಿ ಐದನೇ ಘಟಕಗಳೆಂದರೆ ಬೆಂಗಳೂರು, ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರು.

ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ (ಕೆಜಿಎಂಎಸ್ ಡಿಸಿ) ನ್ನು ಸೊಸೈಟೀಸ್ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯುಕ್ತರು ಸದಸ್ಯ ಕಾರ್ಯದರ್ಶಿಗಳು ಸಮಿತಿ ಉಪಾಧ್ಯಕ್ಷರು ಮತ್ತು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುವರು. ಗಿರಿಧರ ಸಾಲಿಯಾನ್ ಈ ಸಂಸ್ಥೆಯ ಪ್ರಭಾರ ವಿರ್ದೇಶಕರು.

ಈ ಸಂಸ್ಥೆಯನ್ನು ಮಂಗಳೂರಿನಿಂದ ಬಳ್ಳಾರಿಗೆ ವರ್ಗಾಯಿಸುವುದು ನಡೆದಾಗ ಇದಕ್ಕೆ ಬೆಂಗಾವಲಾಗಿ ನಿಂತವರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು. ಶತಾಯಗತಾಯ ಹೋರಾಟ ಮಾಡಿ ಈ ಸಂಸ್ಥೆಯನ್ನು ಸ್ಥಳಾಂತರಿಸುವುದನ್ನು ತಡೆದು ಇದು ಮಂಗಳೂರಲ್ಲೇ ಸ್ಥಾಪನೆಯಾಗಬೇಕು ಎಂದು ಪಟ್ಟು ಹಿಡಿದು ಯಶಸ್ವಿಯಾದವರು. ಅವರು ಪಟ್ಟು ಹಿಡಿದು ಕುಳಿತ ಕಾರಣಕ್ಕೆ ಈ ಸಂಸ್ಥೆ ಮಂಗಳೂರಲ್ಲೇ ನೆಲೆಗೊಂಡು ಈಗ ಸಹಸ್ರಾರು ಮಂದಿಗೆ ನೆರವು ನೀಡುತ್ತಿದೆ.

ಈ ಸಂಸ್ಥೆಯು ಅಲ್ಪಾವಧಿ ತರಬೇತಿಯನ್ನು ನೀಡುವುದರ ಮೂಲಕ ಇಲ್ಲಿ ಕಲಿತವರು ನೆಮ್ಮದಿಯಿಂದ ಬಾಳುವಂತೆ ಮಾಡುತ್ತಿದೆ. ಇಲ್ಲಿರುವ ಯಂತ್ರಗಳು, ಸಲಕರಣೆಗಳು ವಿದೇಶಿ ನಿರ್ಮಿತವಾದವು ಎನ್ನುವುದು ಪ್ಲಸ್ ಪಾಯಿಂಟ್ ಎಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿಗೆ ಬರಬೇಕಾದರೆ ವಿದ್ಯಾರ್ಥಿಗಳು ಡಿಪ್ಲೊಮಾ ಪಡೆದಿರಬೇಕು, ಇಂಜಿನಿಯರಿಂಗ್ ಪದವೀಧರರು ಕೂಡಾ ಆಗಿರಬಹುದು. ಜೊತೆಗೆ 8 ಎಂಟನೆ ತರಗತಿಯನ್ನು ಕಲಿತವರೂ ಕೂಡಾ ಇಲ್ಲಿ ಶಿಕ್ಷಣ ಪಡೆಯಬಹುದು ಅಂದರೆ ಇಲ್ಲಿಗೆ ಬರುವವರೆಲ್ಲರೂ ವಿದ್ಯೆಪಡೆದಿರಬೇಕೆಂದಿಲ್ಲ. ಅವರಿಗೆ ಬೇಕಾಗುವ ಕೋರ್ಸ್ ಗೆ ತಕ್ಕಂತೆ ವಿದ್ಯೆಯಿದ್ದರೂ ಸಾಕು. ಇಂಥ ಸಂಸ್ಥೆ ಬೇರೆಲ್ಲೂ ಸಿಗದು ಎನ್ನುವುದೂ ಕೂಡಾ ಸತ್ಯ.

ಇನ್ ಫಾರ್ಮೇಶನ್ ಟೆಕ್ನಾಲಜಿ: ಇದರಲ್ಲಿ ಸಿಸ್ಕೊ ಐಟಿ ಎಸೆನ್ ಶಿಯಲ್ಸ್ 90 ಗಂಟೆಯ ಶಿಕ್ಷಣ ನೀಡುಲಾಗುತ್ತದೆ. 2 ತಿಂಗಳುಗಳ ಕಾಲ ದಿನಕ್ಕೆ 2 ಗಂಟೆಯಂತೆ ಎಸ್ ಎಸ್ ಎಲ್.ಸಿ ಕನಿಷ್ಟ ಶಿಕ್ಷಣ ಇದ್ದರೆ ಸಾಕು. ರೆಡ್ ಹ್ಯಾಟ್ ಎಡ್ ಮಿನಿಸ್ಟ್ರೇಟರ್ ಕೋರ್ಸ್ ಗೆ 90 ಗಂಟೆ ಶಿಕ್ಷಣ 2 ತಿಂಗಳುಗಳ ಕಾಲ ದಿನಕ್ಕೆ 2 ಗಂಟೆ ಕಲಿಸುತ್ತಾರೆ. ಇದಕ್ಕೆ ತಾಂತ್ರಿಕ ಪದವೀಧರರಾಗಿರಬೇಕು. ಟ್ಯಾಲಿ ಇ ಆರ್ ಪಿ 9 ಕೋರ್ಸ್ 90 ಗಂಟೆ ಶಿಕ್ಷಣ 2 ತಿಂಗಳಕಾಲ ದಿನಕ್ಕೆ 2 ಗಂಟೆಯಂತೆ. ಈ ಕೊರ್ಸ್ ಗೆ ಪಿಯುಸಿ ಕಾಮರ್ಸ್ ಆಗಿರಬೇಕು.

ಅಡ್ವಾನ್ಸಡ್ ವಿಲ್ಡಿಂಗ್ ಟೆಕ್ನಾಲಜಿ: ಬೇಸಿಕ್ ವೆಲ್ಡಿಂಗ್ ನಲ್ಲಿ( ) 360 ಗಂಟೆಯ ಶಿಕ್ಷಣ 3 ತಿಂಗಳ ಕಾಲ ದಿನವೊಂದಕ್ಕೆ 3 ಗಂಟೆಯಂತೆ ನೀಡಲಾಗುತ್ತದೆ. ಇದಕ್ಕೆ ಕನಿಷ್ಟ 8 ನೇ ತರಗತಿ ಕಲಿತಿದ್ದರೂ ಸಾಕು. ಅಡ್ವಾನ್ಸಡ್ ವೆಲ್ಡಿಂಗ್ ಟೆಕ್ನಾಲಜಿಗೆ 720 ಗಂಟೆಗಳ ಶಿಕ್ಷಣವನ್ನು 6 ತಿಂಗಳ ಕಾಲ ದಿನವೊಂದಕ್ಕೆ 3 ಗಂಟೆಯಂತೆ ಕಲಿಸುತ್ತಾರೆ. ಇದಕ್ಕೆ ಎಸ್ ಎಸ್ ಎಲ್ ಸಿ ಉತ್ತೀರ್ಣ ಅಥವಾ ಅನುತ್ತೀರ್ಣವಾಗಿರಬೇಕು. ಟಿಗ್ ವೆಳ್ಡಿಂಗ್ ಕೋರ್ಸ್ ಗೆ 180 ಗಂಟೆಯ ಶಿಕ್ಷಣವನ್ನು ಒಂದೂವರೆ ತಿಂಗಳ ಕಾಲ ದಿನಕ್ಕೆ 3 ಗಂಟೆಯ ಶಿಕ್ಷಣ ನೀಡುತ್ತಾರೆ ಇದಕ್ಕೆ ಬೇಸಿಕ್ ವೆಲ್ಡಿಂಗ್ ಆಗಿರಬೇಕು.

ಮಿಗ್ ವೆಲ್ಡಿಂಗ್ ಗೆ 180 ಗಂಟೆ ಶಿಕ್ಷಣವನ್ನು ಒಂದೂವರೆ ತಿಂಗಳ ಕಾಲ ದಿನವೊಂದಕ್ಕೆ 3 ಗಂಟೆ ಕಲಿಸುತ್ತಾರೆ. ಇದಕ್ಕೂ ಬೇಸಿಕ್ ವೆಲ್ಡಿಂಗ್ ಆಗಿರಬೇಕು. ಟಿಗ್ ಮಿಗ್ ವೆಲ್ಡಿಂಗ್ 360 ಗಂಟೆಗಳ ಕಾಲ 6 ತಿಂಗಳವರೆಗೆ ದಿನವೊಂದಕ್ಕೆ 3 ಗಂಟೆ ಶಿಕ್ಷಣವನ್ನು ಕೊಡಲಾಗುತ್ತದೆ. ಇದಕ್ಕೂ ಬೇಸಿಕ್ ವೆಲ್ಡಿಂಗ್ ಆಗಿರಬೇಕು. ಮಿಗ್ ಟಿಗ್ ಫಾರ್ ಇಂಜಿನಿಯರ್ಸ್ ಶಿಕ್ಷಣವನ್ನು 60 ಗಂಟೆ ಕಾಲ ಒಂದು ತಿಂಗಳು ದಿನವೊಂದಕ್ಕೆ 2 ಗಂಟೆ ಕಾಲ ಕಲಿಸುತ್ತಾರೆ. ಇದಕ್ಕೆ ತಾಂತ್ರಿಕ ಪದವೀಧರರು ಬರಬಹುದು. ರೆಫ್ರಿಜರೇಶನ್ ಅಂಡ್ ಏರ್ ಕಂಡಿಷನಿಂಗ್ : ಇದರಲ್ಲಿ ಟಿಕ್ನಿಷಿನ್ ಏರ್ ಕಂಡೀಷನಿಂಗ್ ಸಿಸ್ಟಮ್ ಗೆ 180 ಗಂಟೆಗಳ ಕಾಲ 3 ತಿಂಗಳವರೆಗೆ ದಿನಕ್ಕೆ 3 ಗಂಟೆಯಂತೆ ಶಿಕ್ಷಣ ನೀಡಲಾಗುತ್ತದೆ. ಈ ಕೋರ್ಸ್ ಗೆ ಐಟಿಐ, ಡಿಪ್ಲೊಮಾ ಅಥವಾ ಇಂಜಿನಿಯರ್ಸ್ ಬರಬಹುದು.

ಟಿಕ್ನಿಷಿನ್ ರೆಫ್ರಿಜರೇಷನ್ ಸಿಸ್ಟಮ್ಸ್ ಕೊರ್ಸ್ ಗೆ 120 ಗಂಟೆಗಳ ಕಾಲ 2 ತಿಂಗಳತನಕ ದಿನವೊಂದಕ್ಕೆ 3 ಗಂಟೆಯ ಶಿಕ್ಷಣವನ್ನು ನೀಡಲಾಗುತ್ತದೆ. ಇದಕ್ಕೆ ಐಟಿಐ ಆಗಿರಬೇಕು. ಟೆಕ್ನಿಷಿನ್- ರೆಫ್ರಿಜರೇಶನ್ ಮತ್ತು ಎ ಸಿ ಸಿಸ್ಟಮ್ಸ್ ಗೆ 240 ಗಟೆಗಳ ಕಾಲ 4 ತಿಂಗಳ ತನಕ ದಿನವೊಂದಕ್ಕೆ 3 ಗಂಟೆ ಶಿಕ್ಷಣ ನೀಡಲಾಗುತ್ತದೆ. ಇದಕ್ಕೂ ಐಟಿಐ ಆಗಿರಬೇಕು. ಈ ಶಿಕ್ಷಣವನ್ನು ಪಡೆಯುವ ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 100% ಶುಲ್ಕ ರಿಯಾಯಿತಿ ಇರುತ್ತದೆ. ಇಲ್ಲಿ ಶಿಕ್ಷಣವನ್ನು ರೆಗ್ಯೂಲರ್ ಬ್ಯಾಚ್ ಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ನೀಡಲಾಗುವುದು. ಇದರ ಉದ್ದೇಶ ಕೂಡಾ ಈಗಾಗಲೇ ಉದ್ಯೋಗದಲ್ಲಿರುವವರೂ ಕೂಡಾ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಬರಬಹುದು. ಇಂಥ ಉದ್ದೇಶವನ್ನು ಹೊಂದಲಾಗಿದೆ.

ಕೌಶಲ್ಯಾಭಿವೃದ್ಧಿಗಾಗಿ ವಿಶೇಷ ತರಬೇತಿ ನೀಡಲು ಮಂಗಳೂರಲ್ಲಿ ಸಂಸ್ಥೆ ಆರಂಭ