ಕೊಡಿಯಾಲ್‍ಬೈಲ್ 30ನೇ ವಾರ್ಡಿನ ಕಾಂಗ್ರೆಸ್ ಸಮಿತಿ ಸಭೆ ಮತ್ತು ವಾರ್ಡ್‍ನ ಮಾಜಿ ಅಧ್ಯಕ್ಷರಾದ ದಿ| ದೇವಪ್ಪ ಸುವರ್ಣರವರ ನುಡಿ-ನಮನ ಕಾರ್ಯಕ್ರಮ ನಗರದ ಬಳ್ಳಾಲ್‍ಬಾಗ್‍ನ ಸಂದೇಶ್ ಹಾಲ್‍ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಶಾಸಕರಾದ ಜೆ.ಆರ್ ಲೋಬೋರವರು ಕಾರ್ಪೋರೇಟರ್ ಪ್ರಕಾಶ್ ಬಿ. ಸಾಲ್ಯಾನ್‍ರವರ ಮತ್ತು ವಾರ್ಡ್‍ನ ಕಾರ್ಯಕರ್ತರ ಕಾರ್ಯಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಗೊಂಡ ವಾರ್ಡ್‍ನ ಶ್ರೀ ಪ್ರೇಮ್‍ನಾಥ್ ಪಿ.ಬಿ ಹಾಗೂ 29ನೇಯ ಕಂಬ್ಳ ವಾರ್ಡಿನ ನಾಗೇಶ್ ಭಂಡಾರಿ ಮತ್ತು ಹಿರಿಯ ಕಾರ್ಯಕರ್ತರಾದ ಪ್ರಾನ್ಸಿಸ್ ಸಿರಿಲ್ ಡಿ’ಸೋಜ ಹಾಗೂ ಸ್ಟಾನಿ ಡಿ’ಸೋಜರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರಗಿತು. ಗೌರವಧ್ಯಕ್ಷರಾಗಿ ರವಿಕುಮಾರ್, ಅಧ್ಯಕ್ಷರಾಗಿ ರಘುರಾಜ್ ಕದ್ರಿ, ಉಪಾಧ್ಯಕ್ಷರಾಗಿ ಅರುಣ್ ಕದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಕದ್ರಿ, ಜೊತೆ ಕಾರ್ಯದರ್ಶಿಯಾಗಿ ಪ್ರತಾಪ್ ಸಾಲ್ಯಾನ್ ಕದ್ರಿ, ಪ್ರಜ್ವಲ್ ದೇವಾಡಿಗ, ಕೋಶಾಧಿಕಾರಿಯಾಗಿ ಭರತ್ ಬಿಜೈ, ವಾರ್ಡ್‍ನ ಪ.ಜಾ/ ಪ.ಪಂ ಘಟಕದ ಅಧ್ಯಕ್ಷರಾಗಿ ದಿನೇಶ್ ಭಾರತಿನಗರ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ವೇಗಸ್, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಸಾಲ್ಯಾನ್, ಕಿಸಾನ್ ಘಟಕದ ಅಧ್ಯಕ್ಷರಾಗಿ ಹೇಮಂತ್ ಕದ್ರಿ, ಯುವ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಪ್ರಥ್ವಿರಾಜ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಮತಾ ಶೆಟ್ಟಿ, ಉಪಾಧ್ಯಕ್ಷೆಯಾಗಿ ಕವಿತಾ, ಪ್ರಧಾನ ಕಾರ್ಯದರ್ಶಿಯಾಗಿ ವಸಂತಿ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ 30ನೇ ವಾರ್ಡಿನ ಕಾರ್ಯಕರ್ತರಿಗೆ ಗುರುತಿನ ಚೀಟಿಯನ್ನು ನೀಡಲಾಯಿತು. ಕಾರ್ಪೋರೇಟರ್ ಪ್ರಕಾಶ್ ಬಿ ಸಾಲ್ಯಾನ್‍ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಆರ್ ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಐವನ್ ಡಿ’ಸೋಜ, ಮ.ನ.ಪಾದ ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ, ನಗರ ಬ್ಲಾಕ್‍ನ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಯುವ ಕಾಂಗ್ರೆಸ್‍ನ ಅಧ್ಯಕ್ಷರಾದ ಮಿಥುನ್ ರೈ, ಸುರೇಶ್ ಬಳ್ಳಾಲ್, ಕಿಸಾನ್ ಘಟಕದ ಅಧ್ಯಕ್ಷರಾದ ನೀರಜ್ ಪಾಲ್, ಬ್ಲಾಕ್‍ನ ಮಹಿಳಾ ಅಧ್ಯಕ್ಷೆ ಶಶಿಕಲಾ, ಕಾರ್ಪೋರೇಟರಾದ ರಜನೀಶ್, ಮಹಮ್ಮದ್, ಅಬ್ದುಲ್ ಲತೀಫ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕರಾದ ಟಿ.ಕೆ ಸುಧೀರ್, ಎನ್‍ಎಸ್‍ಯುಐ ಅಧ್ಯಕ್ಷರಾದ ಆಶೀತ್ ಪಿರೇರಾ ಉಪಸ್ಥಿತರಿದ್ದರು.