ಮಂಗಳೂರು: ಕುದ್ರೋಳಿ ಬೆಂಗರೆಯ ಶ್ರೀ ಕೋಟೆದ ಬಬ್ಬು ದೈವಸ್ಥಾನದ ಜೀರ್ಣೋದ್ದಾರ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಶಾಸಕ ಜೆ.ಆರ್. ಲೋಬೊ ಅವರು ಹೇಳಿದರು.

ಅವರು ಕುದ್ರೋಳಿ ಶ್ರೀ ಕೋಟೆದ ಬಬ್ಬು ದೈವಸ್ಥಾನಕ್ಕೆ ಭೇಟಿ ಕೊಟ್ಟು ಜೀರ್ಣೋದ್ಧಾರ ಕಾಮಗಾರಿಗೆ 10 ಲಕ್ಷ ರೂಪಾಯಿ ಮಂಜೂರು ಮಾತನಾಡುತ್ತಿದ್ದರು.

ಇದು ಪೂರ್ಣಗೊಂಡು ಜನರ ಆಸೆ, ಆಕಾಂಕ್ಷೆಗಳು ನೆರವೇರಲಿ ಎಂದು ಹೇಳಿದ ಅವರು ಈ ಕಾಮಗಾರಿಯನ್ನು ಮುತುವರ್ಜಿವಹಿಸಿ ಮಾಡುವಂತೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಆಸೀಫ್, ಅಸ್ಲಾಂ, ಸುಮನ್, ವಿಕ್ರಾಂತ, ವಸಂತ್, ಶೈಲೇಶ್, ವಿನೋದ್ ಹಾಗೂ ವಿಜಯ್ ಅವರು ಉಪಸ್ಥಿತರಿದ್ದರು.