ಮಂಗಳೂರು: ಕುದ್ರೋಳಿ-ಅಳಕೆ ರಸ್ತೆಯಲ್ಲಿ ನೂತನವಾಗಿ ಬ್ರಿಡ್ಜ್ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 11 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಕುದ್ರೋಳಿ-ಅಳಕೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ ಸುಮಾರು 15 ಮೀಟರ್ ಅಗಲದ ಸೇತುವೆಯ ನಿರ್ಮಾಣ ವೇಗವಾಗಿದ್ದು ಈ ರಸ್ತೆಯ ಅಭಿವೃದ್ಧಿಗೆ ನಾವು ಬದ್ಧರಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಈಗಾಗಲೇ ಮೆಸ್ಕಾಂ ವಿಭಾಗಕ್ಕೆ ವಿದ್ಯುತ್ ಕಂಬ ಹಾಗೂ ವೈಯರ್ ಗಳ ಸ್ಥಳಾಂತರಕ್ಕೆ ಸೂಚನೆ ಕೊಟ್ಟಿದ್ದೇನೆ. ಈ ರಸ್ತೆ ನಗರದ ಮುಖ್ಯ ರಸ್ತೆಯಾಗಿದ್ದು ಜನನಿಭಿಡವಾಗಿದೆ. ಇಲ್ಲಿಯ ರಸ್ತೆ ರಸ್ತೆ ಮತ್ತು ಸೇತುವೆ ನಿರ್ಮಾಣವಾದರೆ ಬಹಳಷ್ಟು ಜನರಿಗೆ ಉಪಯುಕ್ತವಾಗಿಲಿದೆ ಎಂದರು.

ಈ ರಸ್ತೆಯಲ್ಲಿ ಬಂದರು ಕಡೆಗೆ ಹೋಗುವ ಲಾರಿಗಳಿಗೂ ಪ್ರಯೋಜನವಾಗಿಲಿದ್ದು ಆದಷ್ಟು ಶೀಘ್ರದಲ್ಲಿ ಇದರ ಕಾರ್ಯ ಮುಗಿಸಲಿದ್ದೇವೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಗೋಪಾಲಕೃಷ್ಣ ಆಚಾರ್ಯ, ಯೂಸೂಫ್ ಕುದ್ರೋಳಿ, ಕೃತಿನ್ ಕುಮಾರ್ ಉಪಸ್ಥಿತರಿದ್ದರು.