ಮಂಗಳೂರು: ಶಾಸಕ ಜೆ. ಆರ್. ಲೋಬೊ ಇವರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿಯು ಕಾರ್‍ಸ್ಟ್ರೀಟ್‍ನಲ್ಲಿರುವ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಇದರ ಕಳೆದ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.

ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ 2% ಹೆಚ್ಚು ಫಲಿತಾಂಶ ಜಾಸ್ತಿ ಬಂದಿದಾಗಿ ಕಾಲೇಜು ಪ್ರಾಂಶುಪಾಲರು ಸಭೆಯಲ್ಲಿ ತೀಳಿಸಿದರು. ಸುಮಾರು 10 ಲಕ್ಷ ರೂಪಾಯಿ ಅನುದಾನದಲ್ಲಿ ಶಾಸಕರ ನಿಧಿಯಿಂದ ಪೂರ್ಣಗೊಂಡ ಹೊಸ ಕಟ್ಟಡವನ್ನು ಶಾಲಾ ಕಚೇರಿ ಹಾಗು ಗ್ರಂಥಲಯಕ್ಕೆ ಬಳಸಲಾಗುವುದು ಎಂದು ಹೇಳಿದರು. ಶಾಲೆಯ ನಿರ್ವಹಣೆ ಖರ್ಚು-ವೆಚ್ಚದ ಅದಾಂಜು ಪಟ್ಟಿ ತಯಾರಿಸಲು ಹಾಗು ಕಾಲೇಜಿಗೆ ಗಣಕಯಂತ್ರ ಕೊಡುವುದಾಗಿ ಶಾಸಕರು ಸಭೆಯಲ್ಲಿ ತೀಳಿಸಿದರು.

ಬಳಿಕ ಶಾಲೆಯ ವಿಜ್ಞಾನ ಪ್ರಯೋಗಲಯವನ್ನು ಪರಿಶೀಲಿಸಿ, ನವಿಕರೀಸುವ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಎಲ್ವಿರಾ ಫಿಲೊಮಿನಾ, ರಾಜ್ ದೇವಿ, ಪೋಷಕರು ಹಾಗು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್‍ಸ್ಟ್ರೀಟ್‍ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನೆ: ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಸಭೆ

Image from post regarding ಕಾರ್‍ಸ್ಟ್ರೀಟ್‍ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನೆ: ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಸಭೆ