ಮತದಾರರ ಸೇರ್ಪಡೆಯ ವಿಚಾರದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ಚುನಾವಣಾ ಕಛೇರಿ ಮಂಗಳೂರು ಮಹಾನಗರ ಪಾಲಿಕೆ ಲಾಲ್ ಬಾಗ್ ಇಲ್ಲಿ ಪ್ರವೇಶ ಮಾಡಿ ಅಲ್ಲಿದ್ದ ದಾಖಲೆಗಳನ್ನು ವಿಡಿಯೋ ಹಾಗೂ ಚಾಯಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷದವರು ಜಿಲ್ಲಾಧಿಕಾರಿ ಹಾಗು ಮುಖ್ಯ ಚುನಾವಣಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ದೂರನ್ನು ಇಂದು ದಿನಾಂಕ 24.01.2018ರಂದು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಂಗಳೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಬ್ದುಲ್ ಸಲೀಂ, ವಿಶ್ವಾಸ್ ಕುಮಾರ್ ದಾಸ್, ಕಾರ್ಪೋರೇಟರ್ಗಳಾದ ಎ.ಸಿ ವಿನಯರಾಜ್, ಅಪ್ಪಿ, ಪ್ರವೀಣ್ ಚಂದ್ರ ಆಳ್ವ, ಅಬ್ದುಲ್ ಲತೀಫ್, ಪ್ರಕಾಶ್ ಸಾಲ್ಯಾನ್,ಕಾಂಗ್ರೆಸ್ ಮುಖಂಡರುಗಳಾದ ಟಿ.ಕೆ ಸುಧೀರ್, ಪ್ರಭಾಕರ್ ಶ್ರೀಯಾನ್, ಸದಾಶಿವ ಅಮಿನ್,ಆರೀಫ್ ಬಾವಾ, ದುರ್ಗಾಪ್ರಸಾದ್, ನೀರಜ್ ಪಾಲ್, ಭರತೇಶ್ ಅಮಿನ್, ಯೂಸುಫ್ ಉಚ್ಚಿಲ್, ನಮಿತ ರಾವ್, ಆಸಿಫ್,ಹೇಮಂತ್ ಗರೋಡಿ,ಅಶ್ರಫ್ ಬಜಾಲ್ ಮೊದಲಾದವದು ಉಪಸ್ಥಿತರಿದ್ದರು.