ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, 44ನೇ ಬಂದರು ವಾರ್ಡು ಕಾಂಗ್ರೆಸ್ ಸಮಿತಿ ಮತ್ತು ಕೆ.ಎಂ.ಸಿ. ಆಸ್ಪತ್ರೆ, ರೆಡ್‍ಕ್ರಾಸ್ ಬ್ಲಡ್ ಬ್ಯಾಂಕ್ ಹಾಗೂ ಎ.ಜೆ.ಆಸ್ಪತ್ರೆಯ ಸಹಯೋಗದೊಂದಿಗೆ ಶಾಸಕರಾದ ಜೆ.ಆರ್. ಲೋಬೊ ರವರ ನೇತೃತ್ವದಲ್ಲಿ ತಾರೀಕು 17.04.2016ನೇ ಆದಿತ್ಯವಾರದಂದು ಬಂದರ್ ಕಸಾಯಿಗಲ್ಲಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ, ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರವು ನೆರವೇರಿತು. ಈ ಸಂದರ್ಭದಲ್ಲಿ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ ರವರು, ಕಳೆದ ಒಂದು ವರ್ಷದಿಂದ ನನ್ನ ಕ್ಷೇತ್ರದಲ್ಲಿರುವ ವಿವಿಧ ವಾರ್ಡುಗಳಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿ ಒಂದು ಸ್ವಸ್ಥ ಸಮಾಜ ನಿರ್ಮಾಣ ಆಗಬೇಕು. ಈ ಒಂದು ಶಿಬಿರದ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಬಹಳಷ್ಟು ಉಪಯೋಗಕಾರಿಯಾಗುತ್ತದೆ.

ರಾಜ್ಯ ಸರಕಾರ ಆರೋಗ್ಯದ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ನಗರದಲ್ಲಿ ಹೊಸ 7 ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಹಿರಿಯ ಕಾಂಗ್ರೆಸ್ ಮುಖಂಡ ಪ್ರಭಾಕರ್ ಶ್ರೀಯಾನ್, ವಾರ್ಡು ಅಧ್ಯಕ್ಷ ಡಿ.ಎಂ. ಮುಸ್ತಫಾ, ಮಾಜಿ ಮೇಯರ್ ಅಶ್ರಫ್, ಕಾಂಗ್ರೆಸ್ ಮುಖಂಡರುಗಳಾದ ಡಿ.ಎಂ. ಅಸ್ಲಂ, ಆರಿಫ್ ಬಾವಾ, ಜುಮಾ ಮಸೀದಿ ಖತೀಬರಾದ ಸಿರಾಜುದ್ದೀನ್ ಪೈಝಿ, ಕಂಡತಪಳ್ಳಿ ಖತೀಬರಾದ ರಫೀಕ್ ಮದನಿ, ಸಂಶುದ್ದೀನ್, ಪ್ರಮುಖರಾದ ಹಮೀದ್, ಫಾರೂಕು, ಸಂಶುದ್ದೀನ್ ಕಂಡತಪಳ್ಳಿ, ನಮಿತಾ ರಾವ್, ಸಿ.ಎಂ. ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 300 ಮಂದಿ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಂಡರು.