ನಾಳೆ ದಿನಾಂಕ 14.04.2019ನೇ ಭಾನುವಾರ ಸಂಜೆ 6.00 ಗಂಟೆಗೆ ಸರಿಯಾಗಿ ಕದ್ರಿ ಮೈದಾನದಲ್ಲಿ ಖ್ಯಾತ ಚಲನ ಚಿತ್ರ ನಟ, ಮಾಜಿ ಕೇಂದ್ರ ಸಚಿವÀ, ಲೋಕಸಭಾ ಸದಸ್ಯರಾದ ಶ್ರೀ ಶತ್ರುಘ್ನ ಸಿನ್ಹಾ ರವರು ಸಾರ್ವಜನಿಕರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿರುವರು. ಈ ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಮಿಥುನ್ ರೈ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಾಜಿ ಶಾಸಕ ಜೆ.ಆರ್. ಲೋಬೊ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.