ಕಾಂಗ್ರೆಸ್ ಕಾರ್ಯಕರ್ತ ಲೀಲಾಧರ ದೇವಾಡಿಗ ನಿಧನ

ಮಂಗಳೂರು: ಶಕ್ತಿನಗರ 21 ನೇ ವಾರ್ಡ್ ನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾದ ಲೀಲಾಧರ್ ದೇವಾಡಿಗ ಅವರು ಇಂದು ಬೆಳಿಗ್ಗೆ ಆಕ್ಮಸಿಕವಾಗಿ ನಿಧನ ಹೊಂದಿದರು.

ಲೀಲಾಧರ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅರ್ಹನಿಶಿ ದುಡಿಯುತ್ತಿದ್ದರು. ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೇ ತುಂಬಲಾಗದ ನಷ್ಟವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಸಂತಾಪ ಸೂಚಿಸಿದ್ದಾರೆ.

ದೇವಾಡಿಗ ಅವರ ನಿಧನಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ ಹಾಗೂ ವಿಶ್ವಾಸ್ ದಾಸ್ ಅವರು ಸಂತಾಪ ಸೂಚಿಸಿದ್ದಾರೆ.