ಇಂದು ದಿನಾಂಕ: 04.05.2018ರಂದು, ಬೆಳಗ್ಗೆ, ನಗರದ ಪಾಂಡೇಶ್ವರ, ಅಮೃತ್‍ನಗರ ಹಾಗೂ ಪಂಪ್‍ವೆಲ್ ಪರಿಸರದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ. ಜೆ.ಆರ್.ಲೊಬೊ ರವರು ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊ ರವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಕರ್ನಾಟಕ ಸರ್ಕಾರದ ಸಾಧನೆಗಳನ್ನು ಜನರು ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಬಡಜನರಿಗೆ ಮುಟ್ಟಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಗಳೂರು ನಗರದ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ರಸ್ತೆಗಳ ಅಭಿವೃದ್ಧಿ, ಮಾರುಕಟ್ಟೆಗಳ ಪುನರ್‍ನಿರ್ಮಾಣ, ಕೆರೆಗಳ ಅಭಿವೃದ್ಧಿ, ರೈಲ್ವೆ ಅಂಡರ್‍ಪಾಸ್‍ಗಳ ನಿರ್ಮಾಣ, ಪೌರ ಕಾರ್ಮಿಕರ ವಸತಿ ಗೃಹಗಳ ನಿರ್ಮಾಣ ಮುಂತಾದ ಅನೇಕ ಜನ ಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಕಾರ್ಪೋರೇಟರ್ ಆಶಾ ಡಿ’ಸಿಲ್ವ, ಕಾಂಗ್ರೆಸ್ ಪ್ರಮುಖರಾದ ಸದಾಶಿವ ಅಮೀನ್, ಟಿ.ಕೆ.ಸುಧೀರ್, ಸುರೇಶ್ ಶೆಟ್ಟೆ, ನಮಿತಾ ರಾವ್, ಶಶಿರಾಜ್ ಅಂಬಟ್, ಹೇಮಂತ್ ಗರೋಡಿ, ಸುನೀಲ್ ಶೆಟ್ಟಿ, ನರೇಶ್, ರಮಾನಂದ ಪೂಜಾರಿ, ಅರುಣ್ ಕುವೆಲ್ಲೊ, ವರುಣ್ ರಾಜ್ ಅಂಬಟ್, ಡೆನಿಸ್ ಡಿಸಿಲ್ವ, ಸಲಾಮ್ ಎಮ್ಮೆಕೆರೆ, ಕೃತಿನ್ ಕುಮಾರ್, ಸುರೇಶ್ ನಾಯರ್, ಗುರುಪ್ರವೀಣ್, ಮೊದಲಾದವರು ಉಪಸ್ಥಿತರಿದ್ದರು.