ಮಹಾನಗರ ಪಾಲಿಕೆಯಲ್ಲಿ ನಗರದ ಅಭಿವೃದ್ಧಿ ಮಾಡಲಿಕ್ಕೆ ಒಳ್ಳೆಯ ಹಿರಿಯ ಕಾರ್ಪೊರೇಟರುಗಳ ತಂಡವಿದೆ. ಅಧಿಕಾರಿಗಳ ಸಹಕಾರವಿದೆ. ಎಲ್ಲರೂ ಒಗ್ಗಟ್ಟಾಗಿ ನಗರ ಬೆಳವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಅಲ್ಲಲ್ಲಿ ಭರದಿಂದ ನಡೆಯುತ್ತಿದೆ. ಒಳಚರಂಡಿ ಕಾಮಗಾರಿಗೆ ಕುಡ್ಸೆಂಪ್ 2ನೇ ಹಂತದ ಯೋಜನೆ ಈಗಾಗಲೇ ಮಂಜೂರು ಆಗಿದೆ. ಅಮೃತ್ ಯೋಜನೆಯು ಕೂಡಾ ಬರಲಿದೆ. ನಗರದಲ್ಲಿರುವ ಮಾರುಕಟ್ಟೆ ಅಭಿವೃದ್ಧಿಗೊಳಿಸುವ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಲಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕರಾದ ಶ್ರೀ ಜೆ.ಅರ್. ಲೋಬೊ ರವರು ಇಂದು ನಗರದ ಕಲೆಕ್ಟರ್‍ಗೇಟ್ ನಿಂದ ಎಸ್.ಸಿ.ಎಸ್. ಆಸ್ಪತ್ರೆಯ ತನಕದ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುದ್ದಲಿ ಪೂಜೆಯನ್ನು ನೆರೆವೇರಿಸಿ ಮಾತನಾಡಿದ ನೂತನ ಮೇಯರ್ ಶ್ರೀ ಹರಿನಾಥ್ ರವರು ಈಗಾಗಲೇ ದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಸ್ವಚ್ಛತೆಗೆ 3ನೇ ಸ್ಥಾನ ದೊರಕಿದೆ. ಇದು ನಗರಕ್ಕೆ ಹೆಗ್ಗಳಿಕೆಯಾಗಿದೆ. ಆದ್ದರಿಂದ ಇದನ್ನು ನಾವು ಮುಂದುವರಿಸಿಕೊಂಡು ಹೋಗಲಿದ್ದೇವೆ. ಅದೇ ರೀತಿ ರಸ್ತೆ ಅಭಿವೃದ್ಧಿಗೂ ಹೆಚ್ಚಿನ ಮಹತ್ವ ಕಲ್ಪಿಸಿ, ಮಂಗಳೂರು ನಗರಾಭಿವೃದ್ಧಿಗೆ ಮಹತ್ವ ಕೊಡಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಉಪಮೇಯರ್ ಸುಮಿತ್ರ, ನಗರ ಯೋಜನೆ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾಟ್ ಪಿಂಟೋ, ಸಚೇತಕ ಶಶಿಧರ ಹೆಗ್ಡೆ, ಮನಪಾ ಸದಸ್ಯರಾದ ನವೀನ್ ಡಿ.ಸೋಜ, ದೀಪಕ್ ಪೂಜಾರಿ, ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ, ಅಭಿಯಂತರರುಗಳಾದ ಲಿಂಗೇಗೌಡ, ಯಶವಂತ, ಗಣಪತಿ, ಲಕ್ಷ್ಮಣ ಪೂಜಾರಿ, ಗುತ್ತಿಗೆದಾರ ಎಂ.ಜಿ. ಹುಸೈನ್, ಕಾಂಗ್ರೆಸ್ ಮುಖಂಡರುಗಳಾದ ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಅನಿಲ್ ರಸ್ಕಿನಾ, ದಿನೇಶ್ ರಾವ್, ಡೆನ್ನಿಸ್ ಡಿ.ಸಿಲ್ವ, ಹೇಮಂತ್ ಗರೋಡಿ, ನೆಲ್ಸನ್ ಮೊಂತೆರೋ, ಉದಯ ಕುಂದರ್, ಕೃತಿನ್ ಕುಮಾರ್, ಪ್ರಭಾಕರ ಶ್ರೀಯಾನ್, ನವೀನ್ ಡಿ.ಸೋಜ, ಡೆನ್ಸಿಲ್ ಡಿ.ಸೋಜ, ರಫೀಕ್ ಕಣ್ಣೂರು, ಡಿ.ಎಂ. ಅಸ್ಲಂ, ಕಾನ್ಯುಟ್ ಪಿರೇರಾ, ವಿನಯ್ ಲೋಬೊ ಉಪಸ್ಥಿತರಿದ್ದರು.