ಬಹಳ ಸಮಯದಿಂದ ಕರಂಗಲ್ಪಾಡಿ ಮುಖ್ಯ ರಸ್ತೆಯಲ್ಲಿ ಡ್ರೈನೇಜ್ ನೀರು ರಸ್ತೆಗೆ ಹರಿದು ಬಂದು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ರಸ್ತೆಯ ಬದಿಯಲ್ಲಿರುವ ಕಟ್ಟಡದಲ್ಲಿ ವ್ಯಾಪಾರಸ್ಥರಿಂದ ಶಾಸಕ ಶ್ರೀ.ಜೆ.ಆರ್.ಲೋಬೊರವರಿಗೆ ಮನವಿ ನೀಡಲಾಗಿತ್ತು. ಇಂದು ತಾ.17.02.2018 ರಂದು ಈ ಡ್ರೈನೇಜ್ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕ ಲೋಬೊರವರು ಬಹಳ ಸಮಯದಿಂದ ಕರಂಗಲ್ಪಾಡಿ ಮುಖ್ಯ ರಸ್ತೆಯ ಡ್ರೈನೇಜ್ ಪೈಪುಗಳು ಒಡೆದು ಹೋಗಿದ್ದು, ಅದರ ನೀರು ರಸ್ತೆಗೆ ಹರಿದು ಜನರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಸರಕಾರದ ವಿಶೇಷ ಅನುದಾನ ಎಸ್.ಎಫ್.ಸಿ ನಿಧಿಯಿಂದ ರೂ.10ಲಕ್ಷ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಯು ಆರಂಭವಾಗಲಿದೆ. ಈ ಒಂದು ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಕದ್ರಿ ದೇವಸ್ಥಾನದ ಟ್ರಸ್ಟಿ ಸುರೇಶ್ ಕುಮಾರ್, ಕದ್ರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಅರುಣಾ, ಗಿರೀಶ್ ಕಾರಂತ, ವಿಜಯಾ ಲೋಬೊ, ಯಶವಂತ, ಹರ್ಷಕುಮಾರ್, ನಾಗೇಶ್, ಪಾಲಿಕೆಯ ಇಂಜಿನಿಯರ್ ದೇವರಾಜ್, ನಿತ್ಯಾನಂದ, ಗುತ್ತಿಗೆದಾರ ರಜಾಕ್ ಮೊದಲಾದವರು ಉಪಸ್ಥಿತರಿದ್ದರು.