ಇತಿಹಾಸ ಸುಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಮಿಥುನ್ ರೈ ಯವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರೊಂದಿಗೆ ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಕಾರ್ಪೋರೇಟರ್ ಅಶೋಕ್ ಡಿ.ಕೆ, ವಿಶ್ವಾಸ್ ಕುಮಾರ್ ದಾಸ್, ಟಿ.ಕೆ.ಸುಧೀರ್, ಸುರೇಶ್ ಕದ್ರಿ, ಚಂದ್ರಕಲಾ, ಭಾರತಿ, ಗೋಪಾಲ್ ಶೆಟ್ಟಿ, ರಾಜೇಶ್ ಬೆಂಗರೆ, ಸಮರ್ಥ ಭಟ್, ಶಾಂತಳಾ ಗಟ್ಟಿ , ನಿಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಅವರು ಕದ್ರಿ ಪರಿಸರದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತ ಯಾಚಿಸಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಿಥುನ್ ರೈಯವರು, ಕಾಂಗ್ರೆಸ್ ಪಕ್ಷ ಯುವಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ, ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದೆ.ಉದ್ಯೋಗ ಸಮಸ್ಯೆ ದೇಶಾದ್ಯಂತ ಇರುವುದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ನನ್ನ ಆದ್ಯ ಕರ್ತವ್ಯವಾಗಿದೆ. ಕನಸು ಕಂಡು ಓದಿದ ಮಕ್ಕಳ ಉಜ್ವಲ ಭವಿಷ್ಯ ಕೆಲಸ ಅರಸುವುದರಲ್ಲೇ ಕಮರಿ ಹೋಗದಂತೆ ಕೈಗಾರಿಕಾ ಪ್ರದೇಶ ಹಾಗೂ ವಿಶೇಷ ಆರ್ಥಿಕ ವಲಯದ ನಿರ್ಮಾಣ ಮಾಡುವುದು ನನ್ನ ಉದ್ಧೇಶವಾಗಿದೆ ಎಂದರು.