ಮಂಗಳೂರು: ಕದ್ರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ 2019ಕ್ಕೆ ಬರಲಿದ್ದು ಅದನ್ನು ಅದ್ದೂರಿಯಾಗಿಸಲು ಪೂರ್ವ ತಯಾರಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಹಾಗೂ ಅವಶ್ಯಕ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು.

ಬ್ರಹ್ಮಕಲಶ ಕಾರ್ಯಕ್ರಮ ಈ ಭಾಗದ ಜನರಿಗೆ ವಿಶೇಷ ಮಹತ್ವವಾಗಲಿದೆ. ಅದಕ್ಕೆ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು. ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ ಎಂದರು.

ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ ಭಕ್ತಧಿಗಳು ಯಾವುದೇ ಅನಾನುಕೂಲಕ್ಕೆ ಒಳಗಾಗಬಾರದು ಎನ್ನುವುದನ್ನು ನಾವು ಎಚ್ಚರಿಕೆಯಿಂದ ನೋಡಬೇಕು ಎಂದ ಅವರು ಏನೆಲ್ಲಾ ಕೆಲಸಗಳು ಇಲ್ಲಿ ಆಗಬೇಕು ಎನ್ನುವುದನ್ನು ಸೂಚಿಸಿದರೆ ಶಾಸಕನಾಗಿ ನಾನೂ ಮಾಡಲು ನೆರವಾಗಿತ್ತದೆ ಎಂದರು.

ಶಾಸಕ ಜೆ.ಆರ್.ಲೋಬೊ ಅವರು ದೇವಸ್ಥಾನ ಅಭಿವೃದ್ಧಿ ಕಾಮಗಾರಿ, ಕದ್ರಿ ಸ್ಮಶಾನ ಅಭಿವೃದ್ಧಿ,, ದೇವಸ್ಥಾನದ ಬಳಿ ಸಂಚಾರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಈ ಸಭೆಯಲ್ಲಿ ಎ.ಸಿ ಪ್ರಮೀಳಾ, ಆಡಳಿತಾಧಿಕಾರಿ ನಿಂಗೇಗೌಡ, ಟ್ರಸ್ಟಿಗಳಾದ ಸುರೇಶ್ ಕುಮಾರ್ ಕದ್ರಿ, ಚಂದ್ರ ಕಲಾ, ದಿನೇಶ್ ದೇವಾಡಿಗ, ಪೇಜಾವರ, ಪುಷ್ಪಲತಾ ಶೆಟ್ಟಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಮುಂತಾದವರು ಹಾಜರಿದ್ದರು.