ಮಂಗಳೂರು: ಕದ್ರಿ ಜಿಂಕೆ ಉದ್ಯಾನವನದಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಮ್ಯೂಸಿಕಲ್ ಫೌಂಡೇನ್ ಎಪ್ರಿಲ್ ಕೊನೆಯ ವೇಳೆಗೆ ಉದ್ಘಾಟನೆಯಾಗಲಿದೆ ಎಂದು ವಿಧಾನ ಮಂಡಲದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ಇಂದು ಕದ್ರಿ ಪಾರ್ಕ್ ನಲ್ಲಿ ಮೂಡಾ, ತೋಟಗಾರಿಕೆ ಇಲಾಖೆ, ನಗರಪಾಲಿಕೆ ಅಧಿಕಾರಿಗಳ ಜೊತೆ ಸ್ಥಳ ವೀಕ್ಷಣೆ ಮಾಡಿ ಮಾತನಾಡುತ್ತಿದ್ದರು.

ಮೂಡಾ ಕೂಡಾ 30 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಇನ್ನೂ ಇದಕ್ಕೆ ಸುಮಾರು 30 ಲಕ್ಷ ರೂಪಾಯಿ ಬೇಕಾಗುತ್ತದೆ.ಈ ಕಾಮಗಾರಿಯನ್ನು ಬಹುತೇಕ ಮಾರ್ಚ್ ತಿಂಗಳಲ್ಲಿ ಮುಗಿಸಿಕೊಡಬೇಕಾಗಿತ್ತು, ಕಾರಣಾಂತರದಿಂದ ಸಾಧ್ಯವಾಗಿಲ್ಲ. ಇದನ್ನು ತ್ವರಿತವಾಗಿ ಮುಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಸುಮಾರು 500 ಕಾರುಗಳು ನಿಲ್ಲುವ ವ್ಯವಸ್ಥೆ ಮಾಡಬೇಕಾಗಿದೆ. ಸುಮಾರು 50 ಶಾಫ್ ಗಳನ್ನು ನಿರ್ಮಿಸಬೇಕಾಗಿದೆ. ಈ ಎಲ್ಲಾ ಕೆಲಸಗಳೂ ಪೂರ್ಣಗೊಂಡರೆ ಇಲ್ಲಿ ಅತ್ಯಾಧುನಿಕ ಸಂಗೀತಾ ಕಾರಂಜಿಯಾಗುತ್ತದೆ. ಜನರು ಸಂಜೆ ಹೊತ್ತು ವಿಹಾರಕ್ಕೆ ಬಂದು ಇಲ್ಲಿನ ಸಂಗೀತ ಕಾರಂಜಿಯನ್ನು ನೋಡಬಹುದು ಎಂದರು.

ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಮೂಡಾ ಕಮಿಷನರ್ ಶ್ರೀಕಾಂತ್, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ತೋಟಗಾರಿಕೆ ಇಲಾಖೆಯ ಜಾನಕಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ..ಸುಧೀರ್, ಕೃತಿನ್, ಸಂತೋಷ್, ಅರುಣ್ ಕುವೆಲ್ಲೋ, ಪ್ರಭಾಕರ್ ಯೆಯ್ಯಾಡಿ ಮುಂತಾದವರಿದ್ದರು.

ಕದ್ರಿ ಪಾರ್ಕ್ ನಲ್ಲಿ 5 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಸಂಗೀತ ಕಾರಂಜಿ: ಜೆ.ಆರ್.ಲೋಬೊ

ಕದ್ರಿ ಪಾರ್ಕ್ ನಲ್ಲಿ 5 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಸಂಗೀತ ಕಾರಂಜಿ: ಜೆ.ಆರ್.ಲೋಬೊ