ನಗರದ ಕದ್ರಿ ದಕ್ಷಿಣ ವಾರ್ಡಿನ ವ್ಯಾಪ್ತಿಯಲ್ಲಿರುವ ಕದ್ರಿ ನಂತೂರು, ಪದವು, ಕೈಬಟ್ಟಲು, ಟೋಲ್ಗೇಟ್ ಪ್ರದೇಶದ ಮನೆ ಮನೆಗಳಿಗೆ ಮಾಜಿಶಾಸಕರಾದ ಶ್ರೀ ಜೆ.ಆರ್.ಲೋಬೋರವರು ಇಂದು ತಾರೀಕು 13-04-2019ರಂದು ಬೆಳಿಗ್ಗೆ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್‍ಜೆಡಿಎಸ್ ಮೈತ್ರಿಅಭ್ಯರ್ಥಿ ಶ್ರೀ ಮಿಥುನ್‍ರೈ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು ಮಿಥುನ್ ರೈ ಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿ ಮಾಡಿಕೊಂಡರು. ಈ ಸಂಧರ್ಭದಲ್ಲಿ ಮಾಜಿ ಮನಪಾ ಸದಸ್ಯ ಅಶೋಕ್ ಕುಮಾರ್ ಡಿ.ಕೆ, ವಾರ್ಡ್ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಮರಿಯಮ್ಮ ಥೋಮಸ್, ಮೋಹನ್ ಕೊಪ್ಪಳ್, ಮುಖೇಶ್, ಗೌರವ್, ಯತಿನ್, ಶಿವಪ್ರಸಾದ್ , ಭರತ್, ಧೀರಜ್ ದೇವಾಡಿಗ, ಲಿಯಾಕತ್ ಷಾ ಮೊದಲಾದವರು ಉಪಸ್ಥಿತರಿದ್ದರು.