ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಆಧಾರ್ ನೋಂದಣೆ ಅಭಿಯಾನ ಕದ್ರಿಯಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಇಂದು ಆರಂಭವಾಯಿತು.

ಮಂಗಳೂರು ಮಹಾನಗರದಲ್ಲಿ ಇನ್ನೂ ಆಧಾರ್ ನೋಂದಣಿ ಮಾಡಿಸಿಕೊಳ್ಳದಿದ್ದವರು ತಡಮಾಡದೆ ಕದ್ರಿಯಲ್ಲಿರುವ ಮಹಾನಗರ ಪಾಲಿಕೆ ಕಟ್ಟಡದ ನೆಲ ಹಂತಸ್ತಿಗೆ ಬಂದು ಆಧಾರ್ ನೋಂದಣೆ ಮಾಡಿಸಿಕೊಳ್ಳಬಹುದು.

ಮಂಗಳೂರು ನಗರದಲ್ಲಿ ಬಹಳಷ್ಟು ಜನರು ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಪರದಾಡುವುದನ್ನು ಮನಗಂಡು ಈ ಅಭಿಯಾನ ಆರಂಭಿಸಲಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ವಿನಂತಿಸಿದ್ದಾರೆ.