ಮಂಗಳೂರು: ಕಣ್ಣೂರು ನಡುಪಳ್ಳಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯ ಫಂಡ್ ನಿಂದ 1 ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿದ ಶಾಸಕ ಜೆ.ಆರ್.ಲೋಬೊ ಅವರು, ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿಯನ್ನು ನೀಡುವುದಾಗಿ ತಿಳಿಸಿದರು. ಅವರು ಈದ್ ಮಿಲಾದ್ ಸಂದರ್ಭದಲ್ಲಿ ಕಣ್ಣೂರು ಬದ್ರಿಯಾ ಜುಮ್ಮಾ ಮಸೀದಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು. ನಡುಪಳ್ಳಿ ಪ್ರದೇಶ ಅಭಿವೃದ್ಧಿ ಕಾಣಬೇಕಾಗಿದೆ. ಇಲ್ಲಿಯ ಸಮಸ್ಯೆಗಳನ್ನು ನೀಡಿದ ಮೇಲೆ ಈ ಭಾಗಕ್ಕೆ ಕೊಡುಗೆ ನೀಡಬೇಕೆಂದು ಸಣ್ಣ ನೀರಾವರಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ಅನುದಾನ ಪಡೆದುಕೊಂಡಿರುವುದಾಗಿ ತಿಳಿಸಿದ ಅವರು ತಾವೂ ಶಾಸಕರ ನಿಧಿಯಿಂದ ಅನುದಾನ ಮಂಜೂರು ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ರಫಿಕ್ ಕಣ್ಣೂರು, ಹಮೀದ್ ಕಣ್ಣೂರು, ಮಸೀದಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಹಾಜಿ ಹಮೀದ್, ಮೊಹಮ್ಮದ್ , ಶರೀಫ್, ಇಕ್ಬಾಲ್ ಉಪಸ್ಥಿತರಿದ್ದರು. ನಂತರ ಶಾಸಕ ಜೆ.ಆರ್.ಲೋಬೊ ಅವರು ಬಜಾಲ್ ಕಟ್ಟಪುಣಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು. ಇಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು ಈ ಭಾಗದಲ್ಲಿ ರಸ್ತೆಯೇ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದರು. ಇಲ್ಲಿಗೆ ರಸ್ತೆ ನಿರ್ಮಾಣ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.

ಕುಗ್ರಾಮವಾಗಿದ್ದ ಬಜಾಲ್ ಕಟ್ಟಪುಣಿ ಈಗ ರಸ್ತೆ ಹೊಂದುತ್ತಿದ್ದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 1000 ಸಾವಿರ ಜನರಿರುವ ಪ್ರದೇಶದಲ್ಲಿ ರಸ್ತೆಯಿಲ್ಲದೆ ಊಹಿಸಲೂ ಕಷ್ಟವಾಗಿತ್ತು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಸುಮಯ್ಯ, ವಾರ್ಡ್ ಅಧ್ಯಕ್ಷ ಭರತೇಶ್ ಅಮೀನ್, ಅಶ್ರಫ್ ಬಜಾಲ್, ಜ್ಯೋತಿ ಅಶೋಕ್, ಗಂಗಮ್ಮ, ಆನಂದ್ ರಾವ್, ದೇವದಾಸ್ ಮೇಲಂಟ, ಮಜೀದ್, ಅಬ್ದುಲ್ ದಾಯಿ ಮುಂತಾದವರಿದ್ದರು.

ಕಣ್ಣೂರು ನಡುಪಳ್ಳಿಗೆ 1 ಕೋಟಿ, ಬಜಾಲ್ ಕಟ್ಟಪುಣಿಗೆ 5೦ ಲಕ್ಷ : ಜೆ.ಆರ್.ಲೋಬೊ