ಮಂಗಳೂರು: ಮಂಗಳೂರು ಎ ಹೋಬಳಿಯ ಅತ್ತಾವರ ಮತ್ತು ಮಂಗಳೂರು ತೋಟ ಗ್ರಾಮಗಳ ಕಂದಾಯ ಅದಾಲತ್ ಕಾರ್ಯಕ್ರಮ ಸೆ.26 ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಹಳೆ ಕಟ್ಟಡದಲ್ಲಿ ಜರಗಲಿದೆ.

ಈ ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ.ಪಹಣಿ ಪತ್ರದ ತಿದ್ದು ಪಡಿ ಸಹಿತ ಕಂದಾಯ ಇಲಾಖೆಯ ಸಮಸ್ಯೆಗಳಿಗೆ ಈ ಕಂದಾಯ ಅದಾಲತ್ ನಲ್ಲಿ ಸಾರ್ವಜನಿಕರು ಭಾಗವಹಿಸಬಹುದು.