ದಕ್ಷಿಣ ಕನ್ನಡ ಮಂಗಳೂರು ತಾಲೂಕಿನ ಎ ಹೂಬಳಿ ವ್ಯಾಪ್ತಿಯ ಪದವು ಗ್ರಾಮದ ಪದವು ಪಶ್ಚಿಮ, ಪದವು ಸೆಂಟ್ರಲ್, ಪದವು ಪೂರ್ವ ವಾರ್ಡಿನ ಕಂದಾಯ ಅದಾಲತ್ ಹಾಗೂ ಜನ ಸಂಪರ್ಕ ಸಭೆಯನ್ನು ತಾ 12/09/2014 ರಂದು ಕುಲಶೇಖರ ಕೈಕಂಬದ ಯಶಸ್ವಿಸೌಧದ ಹಾಲಿನಲ್ಲಿ ಬೆಳಿಗ್ಗೆ 10.30 ಕ್ಕೆ ಮಾನ್ಯ ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ನಿರ್ದೇಶನದಂತೆ ಆಯೋಜಿಸಲಾಗಿತ್ತು ಈಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಮಹಾಪೌರರಾದ ಪೂಜ್ಯ ಶ್ರೀ ಮಹಾಬಲ ಮಾರ್ಲರವರು ವಹಿಸಿದ್ದರು. ಸಭೆಯಲ್ಲಿ ನಾಗರಿಕರು ಕುಲಶೇಖರ ಶಕ್ತಿನಗರ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟ ಬಗ್ಗೆ ಕಳವಳ ವ್ಯಕ್ತಪಡಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು ಹಾಗೂ 35ನೇ ವಾರ್ಡಿನ ನ್ಯೂಪದವು ರಸ್ತೆಯ ಡಾಮರಿಕರಣ ಹಾಗೂ ಒಳಚರಂಡಿ ವ್ಯವಸ್ತೆಯ ಬಗ್ಗೆ ಮ.ನ.ಪಾ ಮೇಯರ್‍ರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಮೇಯರ್ ಕುಲಶೇಖರ ಶಕ್ತಿನಗರ ರಸ್ತೆಯ ದುರಸ್ಥಿ ಹಾಗೂ ಅಗಲೀಕರಣ ಪ್ರಸ್ತಾವನೆಯು ಈಗಾಗಲೇ ಸರಕಾರದ ಮುಂದಿದ್ದು ನಿಯಮಾನುಸಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಸರಕಾರದ ವಿವಿಧ ಸೌಲಭ್ಯಗಳಾದ ಅಂಗವಿಕಲ ವೇತನ, ಸಂಧ್ಯಾ ಸುರಕ್ಷ, ಮನಸ್ವಿನಿ, ವಿಧವಾ ವೇತನ ಇತ್ಯಾದಿ ಪಿಂಚಣಿಗಳನ್ನು 58 ಮಂದಿಗೆ ವಿತರಿಸಲಾಯಿತು. ಮನೆನಿವೇಶನ ಹಾಗೂ ಹಕ್ಕು ಪತ್ರದ ಬಗ್ಗೆ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ರೇಶನ್ ಕಾರ್ಡಗಳ ನವೀಕರಣ ಮತ್ತು ಆರ್‍ಟಿಸಿಯಲ್ಲಿನ ತಿದ್ದುಪಡಿ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ವಿಮರ್ಶಿಸಲಾಯಿತು ಸಭೆಯಲ್ಲಿ ಮ.ನ.ಪಾ ದ ಉಪ ಮೇಯರ್ ಕವಿತಾ, ಮಾಜಿ ಮೇಯರ್ ಅಬ್ದುಲ್ ಅಜೀಜ್, ಪಾಲಿಕಾ ಸದಸ್ಯೆ ಶ್ರೀಮತಿ ಅಖೀಲಾ ಆಳ್ವ, ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್, ಮಂಗಳೂರು ತಹಶಿಲ್ದಾರ್ ಶ್ರೀ ಮೋಹನ್ ರಾವ್ ಕಂದಾಯ ನೀರೀಕ್ಷಕ ಶ್ರೀ ಜೋಸೆ¥sóï ಮತ್ತು ಪಾಲಿಕೆಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

jana_samparka_sabei_02