ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ 48 ನೇ ವಾರ್ಡ್ ಕಂಕನಾಡಿ ಬಿ.ಎಸ್.ಎನ್.ಎಲ್ ರಸ್ತೆಯ ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶಾಸಕ ಜೆ.ಆರ್.ಲೋಬೊ ಅವರು ಇಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾರ್ಟ್ ಪಿಂಟೊ, ಕಾರ್ಪೊರೇಟರ್ ಆಶಾ ಡಿಸಿಲ್ವಾ, ವಾರ್ಡ್ ಅಧ್ಯಕ್ಷ ಹೇಮಂತ ಗರೋಡಿ ಹಾಗೂ ಸುಜಿತ್ ನೊರೊನ್ಹಾ, ಜಗನ್ನಾಥ ಶೆಟ್ಟಿ, ಅಲ್ವಿನ್ ಡಿಸಿಲ್ವಾ, ರತ್ನಾಕರ್, ಅಶೋಕ್ ಸುಬ್ಬಯ್ಯ, ಸುರೇಶ್, ಡಾ.ನಿಧರ್ಶ ಹೆಗ್ಡೆ, ರಂಜನ್ ಡೇಸಾ, ಪ್ರಾಮೆಶ್ ಮಥಾಯಸ್,, ರಿಚಾರ್ಡ ದೊರೊತಿ ಲೋಬೊ, ರಿಟ್ಟಾ ಸೋನಿ, ವಿಜಯ ಕುಮಾರ್, ಡೈನಾ, ಸುರೇಶ್ ಕುಮಾರ್, ಕಂಟ್ರಾಕ್ಟರ್ ರಘುರಾಮ್ ರೈ , ಶ್ರೀನಿವಾಸ್ ಭಟ್, ಪ್ರದೀಪ್ ಕುಮಾರ್, ಪ್ರಸಾದ್ ಮುಂತಾದವರಿದ್ದರು.