ನಗರದ ಜಪ್ಪಿನಮೊಗರು ತಾರ್ದೋಲ್ಯ ರಸ್ತೆಯ ಡಾಮರೀಕರಣ ಕಾಮಗಾರಿಗೆ ಇಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್ ಲೋಬೊ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್‍ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಲೋಬೊರವರು ಮಾತನಾಡುತ್ತಾ, ರಾಜ್ಯ ಸರಕಾರದಿಂದ ಹಾಗೂ ಮಹಾನಗರ ಪಾಲಿಕೆಯ ಅನುದಾನದಿಂದ ಜಪ್ಪಿನಮೊಗರು ಪ್ರದೇಶಕ್ಕೆ ಹಲವಾರು ಕಾಮಗಾರಿಗಳು ಆಗಿದೆ. ಗ್ರಾಮಾಂತರ ಪ್ರದೇಶವಾಗಿರುವುದರಿಂದ ಇಲ್ಲಿನ ರಸ್ತೆಗಳಿಗೆ ಕಾಯಕಲ್ಪ ನೀಡುವುದು ಅಗತ್ಯವಾಗಿದೆ. ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು.

ಮೇಯರ್ ಕವಿತಾ ಸನಿಲ್ ಮಾತನಾಡಿ, ಈ ಪ್ರದೇಶಕ್ಕೆ ಈ ಮೊದಲು ಭೇಟಿ ನೀಡಿದ್ದು, ರಸ್ತೆಗಳ ಪರಿಸ್ತಿತಿ ಹಾಳಾಗಿರುವುದರಿಂದ ಶಾಸಕ ಲೋಬೊರವರು ಮತ್ತು ಇಲ್ಲಿನ ನಾಗರೀಕರು ನನಗೆ ಮನವಿ ನೀಡಿದ್ದು, ಈ ಕಾಮಗಾರಿಗೆ ಪಾಲಿಕೆಯಿಂದ ರೂ.22 ಲಕ್ಷ ಅನುದಾನ ಬಿಡುಗಡೆಗೆ ಸಾಧ್ಯವಾಯಿತು. ಎಂದರು.

ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಹಿರಿಯ ಕಾಂಗ್ರೆಸ್ ಮುಖಂಡ ಜೆ.ಉಮೇಶ್‍ಚಂದ್ರ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಜೆ.ಸುಧಾಕರ, ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಕುಮಾರ್ ತಂದೋಳಿಗೆ, ಕರುಣಾಕರ ಶೆಟ್ಟಿ ಸುಧೀರ್ ಕಡೇಕಾರ್, ಹರ್ಬಟ್ ಡಿಸೋಜ, ನೀರಜ್ ಪಾಲ್, ಕೀರ್ತನ್ ಕುಮಾರ್, ದೀಕ್ಷಿತ್ ಕ್ರಾಸ್ತಾ , ಲಾವ್ರ್ಯ ಶೆಟ್ಟಿ, ನಾಗಶ್ರೀ, ಯಶೋಧg,À ಶೈಲೇಶ್ ಭಂಡಾರಿ ದಿನೇಶ್ ಕುಲಾಲ್, ತಾರಾನಾಥ ಭಂಡಾರಿ ಅಬ್ದುಲ್ ಲತೀಫ್, ಅಮರನಾಥ ಭಂಡಾರಿ, ರಿಯಾಜ್, ತಾರ್ದೋಲ್ಯ, ರಾಮದಾಸ್ ನಾಯಕ್, ಬಬಿತಾ ಡಿಸೋಜ, ಪ್ರಿಯಾ ಡಿಸೋಜ, ವಾಲ್ಟರ್ ಡಿಸೋಜ ಅಶುಂತಾ ಡಿಸೋಜ, ಗೀತಾ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.