ಮಂಗಳೂರು: ಶಾಸಕ ಜೆ. ಆರ್ ಲೋಬೊರವರು ಭಾರಿ ಮಳೆಗೆ ಕುಸಿತಗೊಂಡ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ ಸಮೀಪದ ಉಮಿಕಾನ- ಸರಿಪಳ್ಳದಲ್ಲಿರುವ ಕಿರು ಸಂಪರ್ಕ ಸೇತುವೆಯನ್ನು ಪರೀಶಿಲಿಸಿ ಓಂದು ತಿಂಗಳೊಳಗೆ ಪುರ್ನರಚಿಸುವ ಭರವಸೆ ನೀಡಿದರು.

ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಖಾಸಗಿ ಜಾಗದಲ್ಲಿ ಪರ್ಯಯ ಮಾರ್ಗವನ್ನು ಮಾಡಲಾಗಿದೆ ಹಾಗು ಸೇತುವೆ ದುರಸ್ತಿ ಕಾಮಗಾರಿ ಈಗಾಗಲೆ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು. ಬದಲಿ ರಸ್ತೆಯಲ್ಲಿ ಸಣ್ಣ ವಾಹನಗಳು ಸಂಚರಿಸಲು ಅನುಕೂಲವಾಗಿದ್ದು ಘನ ವಾಹನಗಳು ತೆರಳಲು ಇಲ್ಲಿ ಸಾಧ್ಯವಾಗುವುದಿಲ್ಲ ಎಂದು ಸಮಜಾಯಿಸಿದರು. ಈ ಕಾಮಗಾರಿಗೆ ಸುಮಾರು 4 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಪಾಲಿಕೆಯ ಆಧಿಕಾರಿಯೊಬ್ಬರು ತೀಳಿಸಿದರು.

ಸ್ಥಳಿಯ ಸಾರ್ವಜನಿಕರ ಮನವಿಗೆ ಸ್ಪಂದಿಸಿ, ಶಾಸಕರು ಸರಿಪಲ್ಲದಿಂದ ಉಮಿಕಾನ್ ಮೈದಾನದವರೆಗೆ ರಸ್ತೆ ಡಾಮರೀಕರಣಕ್ಕೆ ಅನುದಾನ ಬಿಡುಗಡೆ ಮಾಡುವ ಆಶ್ವಾಸನೆ ಈ ಸಂದರ್ಭದಲ್ಲಿ ನೀಡಿದರು.

ಸ್ಥಳಿಯ ಪಾಲಿಕೆ ಸದಸ್ಯ ಬಿ. ಪ್ರಕಾಶ್ ಆಳಪೆ, ಬಸ್ಸ್ ಮಾಲಕ ವಲೇರಿಯಾನ್ ಲೋಬೊ, ನವೀನ್ ಚಂದ್ರ ಸುವರ್ಣ, ಸರೋಶ್ ಡಿ’ಸೂಜ ಮೊದಲಾದವರು ಉಪಸ್ಥಿತರಿದ್ದರು.

ಉಮಿಕಾನ-ಸರಿಪಳ್ಳ: ಕಿರು ಸಂಪರ್ಕ ಪುನರಚನೆಗೆ ಲೋಬೊ ಭರವಸೆ

Image from post regarding ಉಮಿಕಾನ-ಸರಿಪಳ್ಳ: ಕಿರು ಸಂಪರ್ಕ ಪುನರಚನೆಗೆ ಲೋಬೊ ಭರವಸೆ

ಉಮಿಕಾನ-ಸರಿಪಳ್ಳ: ಕಿರು ಸಂಪರ್ಕ ಪುನರಚನೆಗೆ ಲೋಬೊ ಭರವಸೆ

Image from post regarding ಉಮಿಕಾನ-ಸರಿಪಳ್ಳ: ಕಿರು ಸಂಪರ್ಕ ಪುನರಚನೆಗೆ ಲೋಬೊ ಭರವಸೆ