ಮಂಗಳೂರು: ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಾಸಕ ಜೆ.ಆರ್.ಲೋಬೊ ಅವರು ನೊಬರ್ಟ್ ಡಿ’ಸೋಜ ಅವರ ಮನೆಯ ಪರಿಸರದಲ್ಲಿ 200 ಜನರಿಗೆ ಅಕ್ಕಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಇಂದಿರಾ ಗಾಂಧಿ ಅವರು ದೇಶಕ್ಕೆ ಮಹಾನ್ ಕೊಡುಗೆ ನೀಡಿದ ನಾಯಕಿ. ಅವರ ಆದರ್ಶಗಳು ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು.

ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ರೋಟಿ, ಕಪಟ ಔರ್ ಮಖಾನ್ ನಿರ್ಮಿಸುವ ಮೂಲಕ ಈ ದೇಶದ ಪ್ರತಿಯೊಬ್ಬರಿಗೂ ಸ್ವಾಭಿಮಾನದಿಂದ ಬದುಕುವಂತೆ ಮಾಡಿದ ನಮ್ಮ ನಾಯಕಿ. ಅವರು ಇಲ್ಲವಾದರೂ ಅವರ ಜನ್ಮ ದಿನವನ್ನು ನಾವು ಆಚರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಹೆರಾಲ್ಡ್ ಡಿಸೋಜ,, ಮಂಗಳೂರು ಭೂನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿ’ಸಿಲ್ವ, ಜಾರ್ಜ್ ಫೆರ್ನಾಂಡಿಸ್, ಕಾರ್ಪೊರೇಟರ್ ಬಿ.ಪ್ರಕಾಶ್, ಡೆನ್ನಿಸ್ ಡಿಸೋಜ ನಿಡ್ಡೆಲ್, ಡೊನಿ ಡಿಸಿಲ್ವ ಮೈಕಲ್ ಕ್ರಾಸ್ತಾ, ನವೀನ್, ಪ್ರವೀಣ್ ರೇಗೊ ಮುಂತಾದವರಿದ್ದರು.

ನಿಡ್ಡೇಲ್, ನಿಡ್ಡೆಲ್ ಶಾಂತಿ ಗುರಿ, ಸೂರ್ಯನಗರ ಮುಂತಾದ ಪ್ರದೇಶಗಳ ಜನರಿಗೆ ಅಕ್ಕಿ ವಿತರಿಸಲಾಯಿತು.