ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಆಧಾರ್ ನೋಂದಣಿ ಮೇ 22 ಮತ್ತು 23 ರಂದು ಶ್ರೀಕೃಷ್ಣ ಜ್ನಾನೋದಯ ಭಜನಾ ಮಂದಿರ ಕೊಟ್ಟಾರ ಹಾಗೂ ಮೇ 24 ಮತ್ತು 25 ರಂದು ಸಂತ ಪ್ರಾನ್ಸಿಸ್ ಜೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಬಿಜೈಯಲ್ಲಿ ನಡೆಯಲಿರುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.