ಮಂಗಳೂರು: ಅಳಕೆ ಮಾರ್ಕೇಟ್ ಪ್ರದೇಶಕ್ಕೆ ಶಾಸಕ ಜೆ.ಆರ್.ಲೋಬೊ ಅವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಮಾರ್ಕೇಟ್ ನಲ್ಲಿ ಕೆಲಸ ನಿರ್ವಹಿಸಲು ಇರುವ ಅನಾನುಕೂಲತೆಯ ಬಗ್ಗೆ ಶಾಸಕರಿಗೆ ವಿವರಿಸಿದಾಗ ಈ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ನಿರಾತಂಕವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲು ಸೂಚಿಸಿದರು.

ಅಳಕೆ ಮಾರ್ಕೇಟ್ ಪ್ರದೇಶವನ್ನು ಖುದ್ದು ವೀಕ್ಷಿಸಿದ ಶಾಸಕ ಜೆ.ಆರ್.ಲೋಬೊ ಇಲ್ಲಿ ಆಗಬೇಕಾದ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಮಾರ್ಗದರ್ಶನ ಕೊಟ್ಟರು.