ಮಂಗಳೂರು: ಕೇಂದ್ರದ ಮಾಜಿ ಸಚಿವ ಅನಿಲ್ ಮಾಧವ ದವೆ ನಿಧನಕ್ಕೆ ಶಾಸಕ ಜೆ.ಆರ್.ಲೋಬೊ ಅವರು ತಮ್ಮ ಅತೀವ ಸಂತಾಪ ಸೂಚಿಸಿದ್ದಾರೆ. ಅನಿಲ್ ದವೆ ಅವರು ದೇಶಕ್ಕೆ ಅದರಲ್ಲೂ ವಿಶೇಷವಾಗಿ ಪರಿಸರಕ್ಕೆ ಸಲ್ಲಿಸಿದ ಸೇವೆಯನ್ನು ಮರೆಯುವಂತಿಲ್ಲ ಎಂದಿರುವ ಶಾಸಕ ಜೆ.ಆರ್.ಲೋಬೊ ಅವರು ಅವರ ಕುಟುಂಬವರಿಗೆ ದೇವರು ಅವರ ಅಗಲುವಿಕೆಯ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸಿದ್ದಾರೆ.