ಅತ್ತಾವರ 5ನೇ ಅಡ್ಡ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ ಆರ್.ಲೋಬೊ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ನೆರವೇರಿಸಿದರು. ಸುಮಾರು ರೂ. 35 ಲಕ್ಷ ವೆಚ್ಚದಲ್ಲಿ ನಡೆಯುವ ಕಾಮಗಾರಿಯು 14ನೇ ಹಣಕಾಸಿನ ಅನುದಾನದ ನಿಧಿಯಿಂದ ಮಂಜುರಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀ.ಜೆ.ಆರ್ ಲೋಬೊರವರು ಬಹಳ ವರ್ಷಗಳಿಂದ ಈ ಭಾಗದಲ್ಲಿ ಒಳಚರಂಡಿ ಸಮಸ್ಯೆ ಇತ್ತು. ಮೇಲಿನ ಮೊಗರು ಪ್ರದೇಶದಿಂದ ಅತ್ತಾವರದ ಮೂಲಕ ಹರಿಯುವ ಒಳಚರಂಡಿಯ ತ್ಯಾಜ್ಯ ದೊಡ್ಡ ತೋಡುಗಳಲ್ಲಿ ಹರಿದು, ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಅದಲ್ಲದೇ ಮಳೆಗಾಲದಲ್ಲಿ ತೋಡುಗಳಿಂದ ನೀರು ಉಕ್ಕಿ ಹರಿದು ಅದರೊಂದಿಗೆ ತ್ಯಾಜ್ಯ ನೀರು ಮನೆಗಳಿಗೆ ನುಗ್ಗುತ್ತಿತ್ತು. ಈ ಒಂದು ಒಳಚರಂಡಿಯ ಲಿಂಕ್ ಕಾಮಗಾರಿಯು ಪೂರ್ತಿಯಾದರೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ತೊಂದರೆ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ. ತೋಡುಗಳಲ್ಲಿ ನೀರಿನ ಹರಿಯುವಿಕೆ ಜಾಸ್ತಿ ಇರುವುದರಿಂದ, ಇದನ್ನು ಅಗಲೀಕರಣಗೊಳಿಸಲು ಕೆ.ಎಂ.ಸಿ ಬಳಿ ಮಾತನಾಡಲು ಇಚ್ಛಿಸುತ್ತೇವೆ ಎಂದರು.

ಮೇಯರ್ ಕವಿತಾ ಸನಿಲ್ ಮಾತನಾಡಿ, ಬಹಳ ವರ್ಷಗಳ ಬೇಡಿಕೆಯಾಗಿದ್ದು, ಈ ಕಾಮಗಾರಿ ಈಗ ಆರಂಭವಾಗಿದೆ. ಕಾಮಗಾರಿ ಆಗುವಾಗ ಸಾರ್ವಜನಿಕರಿಗೆ ಸ್ವಲ್ಪ ತೊಂದರೆ ಆಗುತ್ತದೆ. ಇದಕ್ಕೆ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಾಲೆಕೆಯ ಉಪಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಾವೂಫ್, ಕಾರ್ಪೋರೇಟರ್ ಗಳಾದ ದಿವಾಕರ್, ಶೈಲಜಾ, ಮಾಜಿ ಕಾರ್ಪೋರೇಟರ್ ರಿಚಾರ್ಡ್ ಕ್ಯಾಸ್ತಾಲಿನೊ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಮಾಜಿ ಕಾರ್ಪೋರೇಟರ್ ಸುಜಾತ ಅಹಲ್ಯಾ ,ಮೀನಾ ಮಲಾನಿ, ಪ್ರದೀಪ್ ಬೇಕಲ್, ರಮಾನಂದ ಪೂಜಾರಿ, ಗೀತಾ ಅತ್ತಾವರ, ಪದ್ಮನಾಭ, ಗುತ್ತಿಗೆದಾರ ಕರ್ನಲ್ ಡಿಸೋಜ, ಪಾಲಿಕೆಯ ಅಧಿಕಾರಿಗಳಾದ ಗುರುರಾಜ್ ಮರಳಹಳ್ಳಿ, ವಿಶಾಲನಾಥ್, ರಘುಪಾಲ ಮೊದಲಾದವರು ಉಪಸ್ಥಿತರಿದ್ದರು.