ಮಂಗಳೂರು:ಮಂಗಳೂರಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಬಸ್ ನಿಲ್ದಾಣಗಳಿಲ್ಲದ ಕಡೆಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಸ್ ವೇ ನಿರ್ಮಾಣ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಸಹನೆ ಮಾಡಿದರು.

ಮಂಗಳೂರಲ್ಲಿ ವಾಹನಗಳ ದಟ್ಟಣಿ ಹೆಚ್ಚುತ್ತಿರುವ ಹಿನ್ನೆಯಲ್ಲಿ ಅವರು ಇಂದು ಜಿಲಾಧಿಕಾರಿಗಳ ಕಚೀರಿಯಲ್ಲಿ ಟ್ರಾಫ್ಹಿಕ್ ಸಭೆಯನುದ್ದೇಶಿಸಿ ಮಾತನಾಡಿದರು. ಮಂಗಳೂರಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳದ ಕಾರಣ ಅಲ್ಲಲ್ಲಿ ವಾಹನಗಳು ನಿಲ್ಲುತ್ತಿವೆ. ಇದು ಸರಿಯಲ್ಲ. ಅರ್ಧದಲ್ಲಿ ಕಾಮಗಾರಿಗಳು ಆಗಿರುವುದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಪೂರ್ಣ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದರು.

ಬಸ್ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಸುಸಜ್ಜಿತವಾದ ಬಸ್ ವೇ ನಿರ್ಮಾಣ ಮಾಡಬೇಕು ಎಂದು ಹೇಳಿದ ಶಾಸಕ ಲೋಬೊ ಅವರು ಬಂಟ್ಸ್ ಹಾಸ್ಟೆಲ್, ಪಿವಿಎಸ್ ಕಡೆಗಳಲ್ಲಿ ಬಸ್ ವೇ ನಿರ್ಮಿಸುವಂತೆ ಹೇಳಿದರಲ್ಲದೇ ಅಗತ್ಯವಿದ್ದ ಕಡೆಗಳಲ್ಲಿ ಆದಷ್ಟು ಬೇಗನೇ ಈ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಬಸ್ ಸಿಬ್ಬಂಧಿಗಳಿಗೆ ಸರಿಯಾದ ತಿಳುವಳಿಕೆ ಕೊಟ್ಟು ಈ ಕೆಲಸದಲ್ಲಿ ಅವರೂ ಪಾಲ್ಗೊಳ್ಳುವಂತೆ ಮಾಡಬೇಕು. ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಬಸ್ ಗಳು ಕರ್ಕಶ ಹಾರ್ನ್ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಜಗದೀಶ್, ಪೊಲೀಸ್ ಆಯುಕ್ತ ಚಂದ್ರಶೇಖರ್, ಎಡಿಸಿ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ನಝೀರ್, ಆರ್ ಟಿಒ ಹೆಗಡೆ ಹಾಗೂ ಬಸ್ ಮಾಲೀಕರು, ಸಿಬ್ಬಂಧಿಗಳು ಸಭೆಯಲ್ಲಿದ್ದರು.