ಮಂಗಳೂರು,ಅ.19: ಮಂಗಳೂರು ನೀರುಮಾರ್ಗದಲ್ಲಿರುವ ಮಹಿಳಾ ಪೂರಕ ಪೌಶ್ಟಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಘಟಕಕ್ಕೆ (ಒSPಖಿಅ) ಭೇಟಿ ನೀಡಿದ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಅಲ್ಲಿನ ಶುಚಿತ್ವ ಮತ್ತು ಗುಣಮಟ್ಟದ ಕಡೆಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು. ತಾಂತ್ರಿಕ ದೋಷ ಇರುವ ಯಂತ್ರೋಪಕರಣಗಳನ್ನು ಅತೀ ತುರ್ತಾಗಿ ಸರಿಪಡಿಸಬೇಕೆಂದು ಆದೇಶಿಸಿದರು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನವರು ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರಾಗಿರುವುದರಿಂದ ಆಹಾರಗಳ ಗುಣಮಟ್ಟ ಕಾಪಾಡಲು ಹುರಿದುಂಬಿಸಿದರು. ಶಾಸಕರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಗಟ್ರೊಟ್ ವೇಗಸ್, ಗ್ರಾಮಾಂತರ ಸಿ.ಡಿ.ಪಿ.ಒ ಶ್ರೀಮತಿ ಶ್ಯಾಮಲ, ನಗರ ಸಿ.ಡಿ.ಪಿ.ಒ ಶ್ರೀಮತಿ ಗುಲಾಬಿ ಹಾಗೂ ಕಾಂಗ್ರೇಸ್ ಮುಖಂಡ ಟಿ.ಕೆ ಸುಧೀರ್, ಕೃತಿನ್ ಕುಮಾರ್, ಜಯಕರ ಸಮರ್ಥ ಮೊದಲಾದವರು ಉಪಸ್ಥಿತರಿದ್ದರು.

visit_neermarga_03visit_neermarga_03